ಇವತ್ತು ರಾಜ್ಯದಾದ್ಯಂತ ಬಿಸಿಲು ಹಾಗೂ ಒಣ ಹವೆ ಮುಂದುವರಿಯಲಿದೆ. ಮಳೆಯ ಸಾಧ್ಯತೆಗಳು ಕಡಿಮೆಯಾಗಿದೆ.
ಅರ್ನಬ್ ಚಂಡಮಾರುತವು ಈ ಮೊದಲ ನಿರೀಕ್ಷೆಯಂತೆ ಅತಿ ಪ್ರಭಲಗೊಳ್ಳುವ ಸಾಧ್ಯತೆಗಳು ಕಡಿಮೆಯಾಗಿದ್ದು, ಒಕ್ಟೊಬರ್ 27ರ ರಾತ್ರಿ ಆಂದ್ರಾದ ಕಾಕಿನಾಡ ಹಾಗೂ ಓಂಗಲ್ ಅಷ್ಟು ವಿಸ್ತಾರ ಪ್ರದೇಶದಲ್ಲಿ ಭೂ ಪ್ರವೇಶಿಸುವ ಸಾಧ್ಯತೆಗಳಿವೆ. ಈಗಿನಂತೆ ಅಲ್ಲಿಂದ ನೇರವಾಗಿ ಉತ್ತರಾಭಿಮುಖವಾಗಿ ಚಲಿಸುವ ಲಕ್ಷಣಗಳಿದ್ದು, ಒಕ್ಟೊಬರ್ 30ರ ಸುಮಾರಿಗೆ ಉತ್ತರ ಪ್ರದೇಶ ರಾಜ್ಯವನ್ನು ದಾಟಿ ನೇಪಾಳ ಪ್ರವೇಶಿಸಿ ಶಿಥಿಲಗೊಳ್ಳುವ ಸಾಧ್ಯತೆಗಳಿವೆ.
ಇದೇ ಸಮಯದಲ್ಲಿ ಒಕ್ಟೊಬರ್ 30ರಂದು ಉತ್ತರ ಅಂಡಮಾನ್ ತೀರದಲ್ಲಿ ಇನ್ನೊಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಅರ್ನಬ್ ಚಂಡಮಾರುತದ ಪಥದಲ್ಲೆ ಸಾಗಿ ಬರುವ ಸಾಧ್ಯತೆಗಳಿವೆ.
ಆದರೆ ನಂತರ ಉತ್ತರಕ್ಕೆ ಚಲಿಸುವ ಸಾಧ್ಯತೆಗಳು ಕಡಿಮೆ ಇರಬಹುದು. ಇದರ ಪರಿಣಾಮದಿಂದ ರಾಜ್ಯದಲ್ಲಿ ನವೆಂಬರ್ 1ರಿಂದ ಮತ್ತೆ ಮಳೆಯಾಗುವ ಲಕ್ಷಣಗಳಿವೆ.
ಇದರ ಜೊತೆಗೆ ಹಿಂಗಾರು ಆರಂಭವಾಗುವ ಸಾಧ್ಯತೆಗಳಿವೆ.
No comments:
Post a Comment