ರಾಜ್ಯದಾದ್ಯಂತ ಉತ್ತರ ಭಾರತದ ಕಡೆಯಿಂದ ಬೀಸುತ್ತಿರುವ ಶುಷ್ಕ ಗಾಳಿಯ ಪರಿಣಾಮದಿಂದ ಒಣಹವೆ ಮುಂದುವರಿಯಲಿದೆ.
ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ತಾತ್ಕಾಲಿಕ ರಾತ್ರಿ ಉತ್ತಮ ಛಳಿಯ ವಾತಾವರಣ ಇರಬಹುದು.
ದಕ್ಷಿಣ ಕರ್ನಾಟಕ ಸಾಮಾನ್ಯ ಛಳಿ ಇರಬಹುದು.
ಅರ್ನಬ್ ಚಂಡಮಾರುತವು ಇವತ್ತು ತಡರಾತ್ರಿ ಆಂದ್ರಾದ ಕಾಕಿನಾಡ ಹಾಗೂ ಓಂಗಾಲ್ ಮಧ್ಯ ಭೂಪ್ರವೇಶಿಸಲಿದೆ. ಅಲ್ಲಿಂದ ಒಕ್ಟೊಬರ್ 28ರಂದು ಸ್ವಲ್ಪ ಮಟ್ಟಿಗೆ ದುರ್ಬಲಗೊಂಡು ಉತ್ತರಾಭಿಮುಖವಾಗಿ ಚಲಿಸುವ ಲಕ್ಷಣಗಳಿವೆ. ಒಕ್ಟೊಬರ್ 30ರ ಸುಮಾರಿಗೆ ನೇಪಾಳ ತಲುಪಿ ದುರ್ಬಲಗೊಳ್ಳುವ ಸಾಧ್ಯತೆಗಳಿವೆ.
ಈಗಿನ IMD ವರದಿಯಂತೆ ವಿಶಾಖಪಟ್ಟಣದಿಂದ 300 ಕಿ. ಮೀ ದೂರದಲ್ಲಿದ್ದು, ಭೂ ಪ್ರವೇಶಿಸುವ ಸಮಯದಲ್ಲಿ ಗರಿಷ್ಠ 140.00 ಕಿ. ಮೀ ವೇಗ ಇರುವ ಸಾಧ್ಯತೆಗಳಿವೆ. ಆಂದ್ರಾ ರಾಜ್ಯದ 16 ಜಿಲ್ಲೆಗಳು ಚಂಡ ಮಾರುತದ ಪ್ರಭಾವಕ್ಕೊಳಗಾಗುವ ವರದಿ ಇದೆ. ಈಗಾಗಲೇ ಮುನ್ನೆಚ್ಚರಿಕೆ ಘೋಷಿಸಲಾಗಿದೆ.
ಇದರೊಂದಿಗೆ ಒಕ್ಟೊಬರ್ 29ರಂದು ಅಂಡಮಾನ್ ಉತ್ತರ ಕರಾವಳಿಯಲ್ಲಿ ಇನ್ನೊಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ನವೆಂಬರ್ 1ರಂದು ಚಂಡಮಾರುತವಾಗಿ ಪರಿವರ್ತನೆಗೊಳ್ಳವ ಲಕ್ಷಣಗಳಿವೆ. ನವೆಂಬರ್ 1 ಅಥವಾ 2ರಂದು ಒಡಿಸ್ಸಾ ಅಥವಾ ಪಶ್ಚಿಮ ಬಂಗಾಳ ಕರಾವಳಿಗೆ ಪ್ರವೇಶಿಸುವ ಸಾಧ್ಯತೆಗಳಿವೆ.
ಇದರೊಂದಿಗೆ ಹಿಂಗಾರು ಇನ್ನಷ್ಟು ತಡವಾಗುವ ಆತಂಕವಿದೆ. ಆದರೂ
ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯ ಮೇಲ್ಮೈ ಉಷ್ಣತೆ ಏರಿಕೆಯಾಗುತ್ತಿದ್ದು, ಈಗಾಗಲೇ 30°C ದಾಟಿರುವುದು ಕಾಣುತ್ತಿದೆ ( ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯ ಸರಾಸರಿ ಉಷ್ಣಾಂಶವು 28° - 30°C).
ಇನ್ನು 2° ರಿಂದ 4° ರಷ್ಟು ಏರಿಕೆಯಾದರೆ ಚಂಡಮಾರುತಗಳ ಸರಣಿ ಆರಂಭವಾಗುವ ಸಾಧ್ಯತೆಗಳಿವೆ.
ನವೆಂಬರ್ 1ರ ಸುಮಾರಿಗೆ ಹಿಂದೂಮಹಾಸಾಗರದ ಉತ್ತರದ ಭೂಮಧ್ಯ ರೇಖೆಯಲ್ಲಿ ಉಂಟಾಗುವ ತಿರುವಿಕೆ ಕಾರಣದಿಂದ ಮಳೆ ಇರಲೂಬಹುದು. (ಮುಂಗಾರು ರೀತಿ)
No comments:
Post a Comment