Advertise

31 October 2022

01.11.2022ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ವಾತಾವರಣ ಹೇಗಿರುತ್ತೆ

01.11.2022ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ವಾತಾವರಣ ಹೇಗಿರುತ್ತೆ :

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ. 
ಕೊಡಗು ಜಿಲ್ಲಾ ಭಾಗದಲ್ಲಿ ಸಂಜೆ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ ಸುಳ್ಯ ಸುತ್ತಮುತ್ತ ಭಾಗಗಳಲ್ಲಿ ಸಹ ಸಂಜೆ ಮೋಡ ಅಥವಾ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. 

ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲಿನ ವಾತಾವರಣ ಇರಲಿದ್ದು ಒಣ ಹವೆ ಮುಂದುವರಿಯಲಿದೆ. 

ಈಗನ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗಗಳಲ್ಲಿ ಮಳೆ ದಿನ ದಿನ ಮುಂದಕ್ಕೆ ಹೋಗುತ್ತಿದೆ. 

ಶ್ರೀಲಂಕಾ  ಪೂರ್ವ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಂತಹ ತಿರುವಿಕೆಯಿಂದ ಹಿಂಗಾರು ದುರ್ಬಲಗೊಳ್ಳುತ್ತಿದೆ. 
ಆದರೂ ನವೆಂಬರ್ 2 ರಿಂದ ಬೆಂಗಳೂರು, ಕೋಲಾರ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. 

30 October 2022

31.10.2022ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ವಾತಾವರಣ ಹೇಗಿರುತ್ತೆ

31.10.2022ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ವಾತಾವರಣ ಹೇಗಿರುತ್ತೆ :

ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಾದ್ಯಂತ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 
ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಶಿೃಂಗೇರಿ, ಬಾಳೆಹೊನ್ನೂರು, ತೀರ್ಥಹಳ್ಳಿ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. 

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. 

ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಒಣ ಹವೆ ಮುಂದುವರಿಯಲಿದೆ. 

ಶ್ರೀಲಂಕಾ ಪೂರ್ವ ಕರಾವಳಿ ಸಮೀಪ ವಾಯುಭಾರ ಕುಸಿತದಂತಹ ತಿರುವಿಕೆ ಆರಂಭವಾಗಿದ್ದರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯ ಸಾಧ್ಯತೆ ಕಡಿಮೆ ಇರಬಹುದು. 

29 October 2022

30.10.2022ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ವಾತಾವರಣ ಹೇಗಿರುತ್ತೆ

30.10.2022ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ವಾತಾವರಣ ಹೇಗಿರುತ್ತೆ :

ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಾದ್ಯಂತ ಹಗಲು ಉಷ್ಣಾಂಶ ಏರಿಕೆಯಾಗಿ ಸಂಜೆಯ ವೇಳೆಗೆ ಮೋಡದ ವಾತಾವರಣ ಇರಲಿದ್ದು, ಘಟ್ಟದ ಕೆಳಗಿನ ತಪ್ಪಲು ಪ್ರದೇಶಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಒಣ ಹವೆ ಮುಂದುವರಿಯಲಿದೆ. 

ಚಾಮರಾಜನಗರದ ಒಂದೆರಡು ಕಡೆ ಮಳೆಯ ಮುನ್ಸೂಚನೆ ಇದೆ. 

ಕೊಡಗು, ಮೈಸೂರು, ಹಾಸನ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಸಂಜೆ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. 

ಉತ್ತರ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ. 

ಈಗನ ಮುನ್ಸೂಚನೆಯಂತೆ ಒಕ್ಟೊಬರ್ 30 ರಂದು ದಕ್ಷಿಣ ಒಳನಾಡು ಅಲ್ಲಿಲ್ಲಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉಡುಪಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. 

28 October 2022

29.10.2022ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ವಾತಾವರಣ ಹೇಗಿರುತ್ತೆ

29.10.2022ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ವಾತಾವರಣ ಹೇಗಿರುತ್ತೆ :

ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. 

ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಪಾವಗಡ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ರಾಮನಗರ, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಾದ್ಯಂತ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. 

ಉತ್ತರ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ. 

ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ವಾಯುಭಾರ ಕುಸಿತಂತಹ ತಿರುವಿಕೆ ಆರಂಭವಾಗಿರುವುದರಿಂದ ಹಿಂಗಾರು ಸ್ವಲ್ಪ ಮಟ್ಟಿಗೆ ಪ್ರಭಾವಿತಗೊಂಡಿದೆ. 
ಈಗನ ಈ ವಾತಾವರಣವು ಒಂದು ವಾರದ ಕಾಲ ಮುಂದುವರಿಯುವ ಲಕ್ಷಣಗಳಿವೆ. 
ಒಕ್ಟೊಬರ್ 30 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ನವೆಂಬರ್ 3 ಅಥವಾ 4 ರ ನಂತರ ಮಳೆಯ ಕಡಿಮೆಯಾಗುವ ಲಕ್ಷಣಗಳಿವೆ. 
ಉತ್ತರ ಕರ್ನಾಟಕದ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆ ಇರಬಹುದು. 

27 October 2022

28.10.2022ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ವಾತಾವರಣ ಹೇಗಿರುತ್ತೆ

28.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ 

ಬಂಗಾಳಕೊಲ್ಲಿಯಲ್ಲಿ ಹಿಂಗಾರು ಮಾರುತಗಳು ಸ್ವಲ್ಪ ಬಲಗೊಳ್ಳುತ್ತಿದ್ದು, ನಾಳೆಯಿಂದ ಅಂದರೆ 28.10.2022ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಹಾಗೂ ಮಲೆನಾಡು ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. 

ಈಗನ ಮುನ್ಸೂಚನೆಯಂತೆ ಒಕ್ಟೊಬರ್ 30, 31 ರಂದು ಬಂಗಾಳಕೊಲ್ಲಿಯ ಆಂದ್ರಾ ಕರಾವಳಿ ಸಮೀಪ ವಾಯುಭಾರ ಕುಸಿತದಂತಹ ತಿರುವಿಕೆಯ ಲಕ್ಷಣಗಳಿವೆ. ಇದರಿಂದ ಹಿಂಗಾರು ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ ಮತ್ತು ದಕ್ಷಿಣ ಕರ್ನಾಟಕದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. 
ಆದರೂ ಉತ್ತರ ಭಾರತದ ಕಡೆಯಿಂದ ಶುಶ್ಕ ಗಾಳಿ ಬೀಸುತ್ತಿರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಮಳೆಯ ಸಾಧ್ಯತೆ ಕಡಿಮೆ ಇರಬಹುದು. 

25 October 2022

26.10.2022ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ವಾತಾವರಣ ಹೇಗಿರುತ್ತೆ :

26.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ. 

ಬಂಗಾಳಕೊಲ್ಲಿಯ ಚಂಡಮಾರುತವು ಶಿಥಿಲಗೊಳ್ಳುತ್ತಿದ್ದು, ಇನ್ನೊಂದು ದಿನದಲ್ಲಿ ತನ್ನ ಪ್ರಭಾವವನ್ನು ಸಂಪೂರ್ಣ ಕಳೆದುಕೊಳ್ಳಲಿದೆ. 

ಈಗನ ಪರಿಸ್ಥಿತಿಯಂತೆ ಗುಜರಾತ್ ಹಾಗೂ ಓಮನ್ ಮಧ್ಯೆ ಬಹಿರ್ಮುಖಿ ತಿರುಗುವಿಕೆ ಕಾರಣದಿಂದ (anti cyclone) ಗುಜರಾತ್, ರಾಜಸ್ಥಾನ ಕಡೆಯಿಂದ ಶುಶ್ಕ ಗಾಳಿ ದಕ್ಷಿಣ ಕಡೆಗೆ ಬೀಸುತ್ತಿದೆ. 

ಈಗನ ಪ್ರಕಾರ 27 ರಿಂದ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ದಕ್ಷಿಣದ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮೋಡ ಅಥವಾ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ದಿನ ಕಳೆದಂತೆ 
ಹಿಂಗಾರು ಚುರುಕಾಗುವ ಲಕ್ಷಣಗಳಿವೆ. 

ಆದರೆ ಈಗಿನ ಉತ್ತರ ಭಾರತದ ಕಡೆಯಿಂದ ಬೀಸುತ್ತಿರುವ ಶುಶ್ಕ ಗಾಳಿಯ ಪ್ರಭಾವ ಹೀಗೆ ಇದ್ದರೆ ಹಿಂಗಾರು ಮಳೆ ಮುಂದಕ್ಕೆ ಹೋಗಬಹುದು

23 October 2022

24.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

24.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಬಿಸಿಲಿನ ವಾತಾವರಣ ಇರಲಿದ್ದು ಸಂಜೆಯ ವೇಳೆಗೆ ಮೋಡ ಕವಿದು  ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 
ದಕ್ಷಿಣ ಕನ್ನಡ ಬಿಸಿಲು ಇರಲಿದ್ದು ಸಂಜೆಯ ವೇಳೆಗೆ ವಿಟ್ಲ, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಕಡಬ ಸುತ್ತಮುತ್ತ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಉಳಿದ ಕರ್ನಾಟಕದ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ರಾತ್ರಿ ತಂಪಾದ ವಾತಾವರಣ ಇರುವ ಸಾಧ್ಯತೆ ಇದೆ. 

ಮುಂಗಾರು ಕಳೆದು ಹಿಂಗಾರು ಆರಂಭವಾದ ಈ ಸಮಯದಲ್ಲಿ ಬಂಗಾಳಕೊಲ್ಲಿಯ ಈ ಚಂಡಮಾರುತವು ಹಿಂಗಾರು ಮಳೆಯ ಮೇಲೆ ತುಂಬಾ ಪ್ರಭಾವ ಬೀರುವ ಸಾಧ್ಯತೆ ಇದೆ. ಈಗಾಗಲೇ ಉತ್ತರ ಭಾರತದ ಕಡೆಯಿಂದ ಬೀಸುತ್ತಿರುವ ಒಣ ಗಾಳಿಯ ಪ್ರಭಾವ ಹೆಚ್ಚಾದರೆ ಹಿಂಗಾರು ಇಲ್ಲಿಗೆ ಕೊನೆಯಾಗಬಹುದು. 

22 October 2022

23.10.2022ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ವಾತಾವರಣ ಹೇಗಿರುತ್ತೆ

23.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಸಂಜೆ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಚಾಮರಾಜನಗರದ ಒಂದೆರಡು ಕಡೆ, ಕೊಡಗು, ಚಿಕ್ಕಮಗಳೂರಿಧ ಶಿೃಂಗೇರಿ, ಕುದುರೆಮುಖ, ತೀರ್ಥಹಳ್ಳಿ, ಹೊಸನಗರ ಸುತ್ತಮುತ್ತ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. 

ಉತ್ತರ ಕನ್ನಡ - ಗೋವಾ ಗಡಿ ಭಾಗಗಳಲ್ಲಿ, ಬೆಳಗಾವಿ - ಮಹಾರಾಷ್ಟ್ರ - ಗೋವಾ ಗಡಿಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. 

ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಶುಶ್ಕ ಹವೆಯ ಮುನ್ಸೂಚನೆ ಇದೆ. 

ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಇಂದು ನಾಳೆಯಲ್ಲಿ ಚಂಡಮಾರುತವಾಗಿ ಪಶ್ಚಿಮ ಬಂಗಾಳದ ಕರಾವಳಿ ಮೂಲಕ ಬಂಗ್ಲಾದೇಶದ ಕರಾವಳಿಗೆ ನಾಳೆ, ನಾಡಿದ್ದರಲ್ಲಿ ಅಪ್ಪಳಿಸಲಿದೆ. 
ವಾಯುಭಾರ ಕುಸಿತದ ಪ್ರಭಾವ ಸಂಪೂರ್ಣ ಕಡಿಮೆಯಾದ ಮೇಲೆ ಅಂದರೆ ಒಕ್ಟೊಬರ್ 27ರ ನಂತರ ರಾಜ್ಯದ ದಕ್ಷಿಣ ಭಾಗಗಳಲ್ಲಿ ಅಲ್ಲಲ್ಲಿ ಮೋಡ ಅಥವಾ ತುಂತುರು ಮಳೆಯ ಮುನ್ಸೂಚನೆ ಇದೆ. 
ಆದರೆ ಈಗಾಗಲೇ ಉತ್ತರ ಭಾರತದ ಕಡೆಯಿಂದ ಬೀಸುತ್ತಿರುವ ಗಾಳಿಯ ಪ್ರಭಾವ ಹೆಚ್ಚಾಗಿದರೆ ಶುಶ್ಕ ಹವೆ ಮುಂದುವರಿಯಬಹುದು


21 October 2022

22.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ವರದಿ :

22.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಅಲ್ಲಲ್ಲಿ, ದಕ್ಷಿಣ ಕನ್ನಡದ ಹೆಚ್ಚಿನ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಉಡುಪಿ ಅಲ್ಲಲ್ಲಿ ಹಾಗೂ ಉತ್ತರ ಒಂದೆರಡು ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಕೊಡಗು, ಸೋಮವಾರಪೇಟೆ, ಮೂಡಿಗೆರೆ, ಶಿೃಂಗೇರಿ, ಕುದುರೆಮುಖ, ತೀರ್ಥಹಳ್ಳಿ, ಆಗುಂಬೆ, ಹೊಸನಗರ, ಸಾಗರ ಸುತ್ತಮುತ್ತ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಮೈಸೂರು, ಚಾಮರಾಜನಗರ, ಕೋಲಾರ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. 

ಉಳಿದ ಕರ್ನಾಟಕದ ಭಾಗಗಳಲ್ಲಿ ಹೆಚ್ಚಿನ ಅವಧಿಯೂ ಬಿಸಿಲಿನ ವಾತಾವರಣದ ಇರಲಿದ್ದು ಸಂಜೆ ಅಲ್ಲಲ್ಲಿ ಮೋಡ ಕವಿಯಲಿದ್ದು, ಮಂಡ್ಯ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಕಲಬುರ್ಗಿ, ಬೀದರ್ ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆಯೂ ಇದೆ. 

ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಬಲಗೊಳ್ಳುತ್ತಿದ್ದು, ಇನ್ನು ಮೂರು ದಿನಗಳಲ್ಲಿ ಉತ್ತರಕ್ಕೆ ಪಯಣಿಸಲು ಆರಂಭಿಸಿ ಒಡಿಶಾದ ಕರಾವಳಿಯ ಮೂಲಕ ಚಲಿಸಿ ಒಕ್ಟೊಬರ್ 25 ಅಥವಾ 26ರಂದು ಬಂಗ್ಲಾದೇಶ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ
ಈ ವಾಯುಭಾರ ಕುಸಿತವು ಚಂಡಮಾರುತವಾಗುವ ಲಕ್ಷಣಗಳಿವೆ ಹಾಗೂ ಉತ್ತರಕ್ಕೆ ಚಲಿಸುತ್ತಿದ್ದಂತೆಯೇ ರಾಜ್ಯದಾದ್ಯಂತ ಹಿಂಗಾರು ಹಿಂದೆ ಸರಿದು ಒಣ ಹವೆ ಪ್ರವೇಶಿಸಲಿದೆ. 

20 October 2022

21.10.2022ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ವಾತಾವರಣ ಹೇಗಿರುತ್ತೆ

21.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಗುಡುಗು ಸಹಿತ ಸಾಮಾನ್ಯ, ದಕ್ಷಿಣ ಕನ್ನಡದ ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಗುಡುಗು ಸಹಿತ ಉತ್ತಮ, ಸುಳ್ಯ, ಸುಬ್ರಹ್ಮಣ್ಯ ಸುತ್ತಮುತ್ತ ಸೇರಿದಂತೆ ಉಳಿದ ದ. ಕ. ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಡುಪಿಯ ಕಾರ್ಕಳ ಸುತ್ತಮುತ್ತ ಉತ್ತಮ, ಉಳಿದ ಭಾಗಗಳಲ್ಲಿ ಸಾಮಾನ್ಯ ಹಾಗೂ ಉತ್ತರ ಕನ್ನಡದ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.

ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ.

ಕೋಲಾರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಸಂಜೆ ಅಲ್ಲಲ್ಲಿ ಮೋಡ ಅಥವಾ ತುಂತುರು ಮಳೆಯ ಮುನ್ಸೂಚನೆ ಇದೆ. 

ಬಂಗಾಳಕೊಲ್ಲಿಯ ಅಂಡಮಾನ್ ಕರಾವಳಿಯಲ್ಲಿಯ ಉಂಟಾಗಿರುವ ವಾಯುಭಾರ ಕುಸಿತದಂತಹ ತಿರುವಿಕೆ ಹಾಗೆಯೇ ಇದ್ದು ಬಲಗೊಳ್ಳುವ ಸಮಯ ಮುಂದೆ ಸರಿಯುತ್ತಿದೆ. ಈಗಿನ ಪ್ರಕಾರ ಚಂಡಮಾರುತವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಆದರೂ ಒಕ್ಟೊಬರ್ 23ರ ನಂತರ ರಾಜ್ಯದಾದ್ಯಂತ ಮಳೆ ದೂರವಾಗುವ ಲಕ್ಷಣಗಳಿವೆ.

19 October 2022

20.10.2022ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ವಾತಾವರಣ ಹೇಗಿರುತ್ತೆ

20.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ, ಕಾರ್ಕಳ ಸುತ್ತಮುತ್ತ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. 
ಉತ್ತರ ಕನ್ನಡದ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮೈಸೂರು ಉತ್ತರ, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ತುಮಕೂರು ದಕ್ಷಿಣ, ದಾವಣಗೆರೆ, ಬಳ್ಳಾರಿ, ರಾಯಚೂರು, ಹಾವೇರಿ, ಗದಗ, ಬಾಗಲಕೋಟೆ, ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ. 

ಮೈಸೂರು ದಕ್ಷಿಣ, ಚಿಕ್ಕಬಳ್ಳಾಪುರ, ತುಮಕೂರು ಉತ್ತರ, ಧಾರವಾಡ, ಬೆಳಗಾವಿ, ವಿಜಯಪುರ, ಕೊಪ್ಪಳ, ಯಾದಗಿರಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಬಂಗಾಳಕೊಲ್ಲಿಯ ಅಂಡಮಾನ್ ಕರಾವಳಿಯಲ್ಲಿಯ ವಾಯುಭಾರ ಕುಸಿತವು ಇನ್ನೂ ಆರಂಭಿಕ ಹಂತದಲ್ಲಿದ್ದು, ಬಲಗೊಂಡರೆ ಮಾತ್ರ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಬಹುದು. 
ಈಗನ ಪರಿಸ್ಥಿತಿಯಂತೆ ವಾಯುಭಾರ ಕುಸಿತವು ಒಕ್ಟೊಬರ್ 21ರ ಬಲಗೊಳ್ಳುವ ಲಕ್ಷಣಗಳಿವೆ. 

18 October 2022

Weather report upto 8.00am 19.10.2022




19.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕೇರಳ ರಾಜ್ಯದ ಕರಾವಳಿಯ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. 
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡದ ಸುಳ್ಯ ಹಾಗೂ ಉಡುಪಿಯ ಕಾರ್ಕಳ ಸುತ್ತಮುತ್ತ ಭಾಗಗಳಲ್ಲಿ ಸ್ವಲ್ಪ ಜಾಸ್ತಿ ಇರಬಹುದು. 

ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರ, ಪಾವಗಡ, ಕಲಬುರ್ಗಿ ಹಾಗೂ ಬೀದರ್ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. 

ರಾಜ್ಯದಾದ್ಯಂತ ಮೋಡದ ವಾತಾವರಣ ಇರಲಿದ್ದು, ಕೊಡಗು, ಶಿೃಂಗೇರಿ, ಕುದುರೆಮುಖ, 
ಮೈಸೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಧಾರವಾಡ, ಬೆಳಗಾವಿ, ಗದಗ, ಕೊಪ್ಪಳ, ವಿಜಯಪುರ, ಬಳ್ಳಾರಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ಗುಡುಗು ಸಹಿತ ತುಂತುರು ಮಳೆಯ ಮುನ್ಸೂಚನೆ ಇದೆ. 

ಬಂಗಾಳಕೊಲ್ಲಿಯ ಅಂಡಮಾನ್ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಂತಹ ತಿರುವಿಕೆ ವಾಯುಭಾರ ಕುಸಿತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದ್ದು, ಬಲಗೊಂಡರೆ ಹಿಂಗಾರು ದುರ್ಬಲಗೊಳ್ಳುವ ಸಾಧ್ಯತೆ ಅಧಿಕವಾಗಿದೆ. 

ಈಗನ ಮುನ್ಸೂಚನೆಯಂತೆ ಈ ವಾಯುಭಾರ ಕುಸಿತವು ಚಂಡಮಾರುತವಾಗಿ ಉತ್ತರ ಆಂದ್ರಾ ಅಥವಾ ಒಡಿಶಾ ಕರಾವಳಿಗೆ ಅಪ್ಪಳಿಸುವ ಲಕ್ಷಣಗಳಿವೆ. ಒಕ್ಟೊಬರ್ 22ರ ನಂತರ ರಾಜ್ಯದಾದ್ಯಂತ ಮಳೆ ದೂರವಾಗಿ ಬಿಸಿಲಿನ ವಾತಾವರಣದ ಸಾಧ್ಯತೆ ಇದೆ. 

17 October 2022

18.10.2022ರ ಬೆಳಿಗ್ಗೆ 8 ಗಂಟೆವರೆಗೆ

18.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದ್ದರೆ, ದಕ್ಷಿಣದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಗುಡುಗಿನೊಂದಿಗೆ ಉತ್ತಮ ಮಳೆಯ ಮುನ್ಸೂಚನೆ ಇದೆ. ಉಳಿದ ದಕ್ಷಿಣ ಕನ್ನಡ ಗುಡುಗು ಸಹಿತ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಿರುವ ಮುನ್ಸೂಚನೆ ಇದೆ. 
ಉಡುಪಿಯ ಕಾರ್ಕಳ ಸುತ್ತಮುತ್ತ ಉತ್ತಮ ಮಳೆಯ ಮುನ್ಸೂಚನೆ ಇದ್ದರೆ ಉಳಿದ ಭಾಗಗಳಲ್ಲಿ ಸಾಮಾನ್ಯ ಹಾಗೂ ಉತ್ತರ ಕನ್ನಡದ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. 

ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಭಾರಿ ಮಳೆಯ ಮುನ್ಸೂಚನೆ ಇದೆ. 

ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ರಾಮನಗರ, ಬೆಂಗಳೂರು, ದಾವಣಗೆರೆ, ಹಾವೇರಿ, ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದ್ದು,  ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಗದಗ, ಬಾಗಲಕೋಟೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. 

ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತದಂತ ತಿರುವಿಕೆ ಮತ್ತಷ್ಟು ಪಶ್ಚಿಮಕ್ಕೆ ಚಲಿಸಿದ್ದು, ಇದರಿಂದ ರಾಜ್ಯಕ್ಕೆ ಯಾವುದೇ ಪರಿಣಾಮವಿಲ್ಲ. 
ಬಂಗಾಳಕೊಲ್ಲಿಯ ಅಂಡಮಾನ್ ಪೂರ್ವ ಕರಾವಳಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗಿದ್ದು, ಪ್ರಭಲಗೊಳ್ಳುವ ಮುನ್ಸೂಚನೆ ಇದೆ. ಈ ವಾಯುಭಾರ ಕುಸಿತವು ಪ್ರಭಲಗೊಂಡಂತೆ ಹಿಂಗಾರು ಮಾರುತಗಳು ದುರ್ಬಲಗೊಳ್ಳಲಿದೆ. 




16 October 2022

17.10.2022ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ವಾತಾವರಣ ಹೇಗಿರುತ್ತೆ

17.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಹೆಚ್ಚಿನ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು ಅಲ್ಲಲ್ಲಿ ಸಂಜೆ ಗುಡುಗು ಸಹಿತ ತುಂತುರು ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಗುಡುಗಿನೊಂದಿಗೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ದಕ್ಷಿಣ ಕನ್ನಡದ ಭಾಗಗಳಲ್ಲಿ ಗುಡುಗು ಸಹಿತ ತುಂತುರು ಮಳೆಯ ಮುನ್ಸೂಚನೆ ಇದೆ. 
ಉಡುಪಿಯ ಕಾರ್ಕಳ ಸುತ್ತಮುತ್ತ ಹಾಗೂ ಗಡಿ ಭಾಗಗಳಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 
ಉತ್ತರ ಕನ್ನಡ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಕೊಡಗು, ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಪಾವಗಡ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಬಾಗಲಕೋಟೆ, ಬಳ್ಳಾರಿ, ಗದಗ, ರಾಯಚೂರು, ವಿಜಯಪುರ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. 

ಕೋಲಾರ, ಹಾವೇರಿ, ಧಾರವಾಡ, ಬೆಳಗಾವಿ, ಯಾದಗಿರಿ, ಕಲಬುರ್ಗಿ, ಬೀದರ್ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ರಾಜ್ಯದಾದ್ಯಂತ ಒಕ್ಟೊಬರ್ 17 ಮತ್ತು 18ರಂದು ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗುವ ಲಕ್ಷಣಗಳಿದ್ದು 19 ಮತ್ತು 20ರಂದು ಕರಾವಳಿ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆ ಸ್ವಲ್ಪ ಬಿರುಸಾಗಿರುವ ಸಾಧ್ಯತೆ ಇದೆ. 
ರಾಜ್ಯದ ಉತ್ತರ ಕರಾವಳಿ ಹಾಗೂ ಒಳನಾಡಿನಾದ್ಯಂತ ಒಕ್ಟೊಬರ್ 22ರಿಂದ ಮಳೆ ತುಂಬಾ ಕಡಿಮೆಯಾಗಿ ಹೆಚ್ಚಿನ ಅವಧಿ ಬಿಸಿಲಿನ ವಾತಾವರಣದ ಮುನ್ಸೂಚನೆ ಇದೆ. ಕರಾವಳಿಯಲ್ಲಿ ಒಕ್ಟೊಬರ್ 24 ರಿಂದ ದಕ್ಷಿಣ ಕರಾವಳಿಯಲ್ಲಿ ಸಹ ಮಳೆ ಕಡಿಮೆಯಾಗುವ ಮುನ್ಸೂಚನೆ ಇದೆ.
ಈಗನ ಅರಬ್ಬಿ ಸಮುದ್ರದ ವಾಯುಭಾರ ಕುಸಿತದಂತಹ ತಿರುವಿಕೆಯು ಪಶ್ಚಿಮಕ್ಕೆ ಚಲಿಸುತ್ತಿರುವುದರಿಂದ ಯಾವುದೇ ಪರಿಣಾಮಗಳಿಲ್ಲ. ಆದರೆ ಹಿಂಗಾರು ಸ್ವಲ್ಪ ಮಟ್ಟಿಗೆ ಪ್ರಭಾವಿತಗೊಳ್ಳಬಹುದು. 

ಈ ಮಧ್ಯೆ ವಾಯುಭಾರ ಕುಸಿತಗಳುಂಟಾದರೆ ಬದಲಾಗಬಹುದು. 




15 October 2022

16.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

16.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಅಲ್ಲಲ್ಲಿ ಸಾಮಾನ್ಯ ಮಳೆ, ದಕ್ಷಿಣ ಕನ್ನಡ ಸುಳ್ಯ, ಸುಬ್ರಹ್ಮಣ್ಯ ಸುತ್ತಮುತ್ತ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಉಳಿದ ದಕ್ಷಿಣ ಕನ್ನಡ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಡುಪಿಯ ಕಾರ್ಕಳ ಸುತ್ತಮುತ್ತ ಉತ್ತಮ ಮಳೆಯಾದರೆ ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. 

ಕೊಡಗು, ಚಿಕ್ಕಮಗಳೂರಿನ ಶಿೃಂಗೇರಿ, ತೀರ್ಥಹಳ್ಳಿ, ಆಗುಂಬೆ, ಕುದುರೆಮುಖ, ಹೊಸನಗರ ಸುತ್ತಮುತ್ತ ಭಾಗಗಳಲ್ಲಿ, ಶಿವಮೊಗ್ಗ, ಧಾರವಾಡ, ಹಾವೇರಿ, ಬೆಳಗಾವಿ, ಬಾಗಲಕೋಟೆ, ಗದಗ, ಬಳ್ಳಾರಿ, ರಾಯಚೂರು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. 

ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ ಜಿಲ್ಲೆಗಳಲ್ಲಿ ಸಹ ಉತ್ತಮ ಮಳೆಯ ಮುನ್ಸೂಚನೆ ಇದೆ. 
ಮೈಸೂರು, ಹಾಸನ, ಮಂಡ್ಯ, ತುಮಕೂರು, ಉಳಿದ ಚಿಕ್ಕಮಗಳೂರು, ದಾವಣಗೆರೆ, ವಿಜಯಪುರ, ಕೊಪ್ಪಳ, ಯಾದಗಿರಿ, ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

ಅರಬ್ಬಿ ಸಮುದ್ರದಲ್ಲಿ ಹಾಗೂ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ರೀತಿಯ ವಾತಾವರಣವು ಉಂಟಾಗಿದ್ದರೂ ಸಮತೋಲನಗೊಂಡು ಅಷ್ಟೇನು ಪರಿಣಾಮ ಬೀರುವ ಲಕ್ಷಣಗಳಿಲ್ಲ. 

14 October 2022

15.10.2022ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ವಾತಾವರಣ ಹೇಗಿರುತ್ತೆ

15.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದ್ದರೆ, ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಉಡುಪಿ - ಶಿವಮೊಗ್ಗ - ಚಿಕ್ಕಮಗಳೂರು ಗಡಿ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದ್ದರೆ. ಉತ್ತರ ಕನ್ನಡ - ಬೆಳಗಾವಿ - ಧಾರವಾಡ ಗಡಿ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. 

ವಿಜಯಪುರ, ಕೊಪ್ಪಳ ಉತ್ತಮ ಮಳೆಯ ಮುನ್ಸೂಚನೆ ಇದ್ದರೆ, ಬೆಳಗಾವಿ, ಬಾಗಲಕೋಟೆ, ಗದಗ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ಪಾವಗಡ, ಹಾಸನ, ಮಂಡ್ಯ, ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. 


ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಂಥಹ ತಿರುಗುವಿಕೆಯಿಂದ ಅಂತಹ ಪರಿಣಾಮ ಇಲ್ಲದಿದ್ದರೂ ಕರಾವಳಿ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಬಹುದು. 
ಈಗನ ಪ್ರಕಾರ ಕರಾವಳಿ 19ರ ತನಕ ಘಟ್ಟದ ಕೆಳಗಿನ ತಪ್ಪಲು ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆ ಸಾಧ್ಯತೆ ಇದೆ. 
20ರಿಂದ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಮಲೆನಾಡು ಹಾಗೂ ಒಳನಾಡು ಭಾಗಗಳಲ್ಲಿ 17ರಿಂದ ಮಳೆ ಕಡಿಮೆಯಾದರೆ 20ರ ನಂತರ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆ ಜೋರಾಗುವ ಮುನ್ಸೂಚನೆ ಇದೆ. 



13 October 2022

14.10.2022ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ವಾತಾವರಣ ಹೇಗಿರುತ್ತೆ?

14.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಪೂರ್ವ ಮತ್ತು ಪಶ್ಚಿಮದ ಮೋಡಗಳು ಸಂದಿಸುವುದರಿಂದ ದಕ್ಷಿಣ ಕನ್ನಡದ ಘಟ್ಟದ ಕೆಳಗಿನ ತಪ್ಪಲು ಪ್ರದೇಶಗಳಾದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ. ಉಡುಪಿ, ಉತ್ತರ ಕನ್ನಡ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. 

ಕೊಡಗು, ಸಕಲೇಶಪುರ, ಮೂಡಿಗೆರೆ, ಶಿೃಂಗೇರಿ, ಚಾರ್ಮಾಡಿ, ಆಗುಂಬೆ, ತೀರ್ಥಹಳ್ಳಿ, ಹೊಸನಗರ, ಸಾಗರ ಸುತ್ತಮುತ್ತ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. 

ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಪಾವಗಡ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಗದಗ, ಬಳ್ಳಾರಿ, ಯಾದಗಿರಿ, ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. 

ಹಾವೇರಿ, ಧಾರವಾಡ, ಕೊಪ್ಪಳ, ವಿಜಯಪುರ, ರಾಯಚೂರು ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಈಗನ ಮುನ್ಸೂಚನೆಯಂತೆ ಒಕ್ಟೊಬರ್ 16 ರಾಜ್ಯದಾದ್ಯಂತ ಮಳೆಯ ತೀವ್ರತೆ ಕಡಿಮೆ ಆದರೂ 20ರಿಂದ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. 
ಇವತ್ತಿನಿಂದ 3 ದಿನಗಳ ಕಾಲ ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. 



07.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

07.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಸಂ...