Advertise

25 October 2022

26.10.2022ರ ಬೆಳಿಗ್ಗೆ 8 ಗಂಟೆವರೆಗೆ ಕರ್ನಾಟಕದ ವಾತಾವರಣ ಹೇಗಿರುತ್ತೆ :

26.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ. 

ಬಂಗಾಳಕೊಲ್ಲಿಯ ಚಂಡಮಾರುತವು ಶಿಥಿಲಗೊಳ್ಳುತ್ತಿದ್ದು, ಇನ್ನೊಂದು ದಿನದಲ್ಲಿ ತನ್ನ ಪ್ರಭಾವವನ್ನು ಸಂಪೂರ್ಣ ಕಳೆದುಕೊಳ್ಳಲಿದೆ. 

ಈಗನ ಪರಿಸ್ಥಿತಿಯಂತೆ ಗುಜರಾತ್ ಹಾಗೂ ಓಮನ್ ಮಧ್ಯೆ ಬಹಿರ್ಮುಖಿ ತಿರುಗುವಿಕೆ ಕಾರಣದಿಂದ (anti cyclone) ಗುಜರಾತ್, ರಾಜಸ್ಥಾನ ಕಡೆಯಿಂದ ಶುಶ್ಕ ಗಾಳಿ ದಕ್ಷಿಣ ಕಡೆಗೆ ಬೀಸುತ್ತಿದೆ. 

ಈಗನ ಪ್ರಕಾರ 27 ರಿಂದ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ದಕ್ಷಿಣದ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮೋಡ ಅಥವಾ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ದಿನ ಕಳೆದಂತೆ 
ಹಿಂಗಾರು ಚುರುಕಾಗುವ ಲಕ್ಷಣಗಳಿವೆ. 

ಆದರೆ ಈಗಿನ ಉತ್ತರ ಭಾರತದ ಕಡೆಯಿಂದ ಬೀಸುತ್ತಿರುವ ಶುಶ್ಕ ಗಾಳಿಯ ಪ್ರಭಾವ ಹೀಗೆ ಇದ್ದರೆ ಹಿಂಗಾರು ಮಳೆ ಮುಂದಕ್ಕೆ ಹೋಗಬಹುದು

No comments:

Post a Comment

20.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

20.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರ್ನಾಟಕ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ...