Advertise

03 August 2026

04.08.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

ಹಿಂದೂ ಮಹಾಸಾಗರದ ಹವಾಮಾನದಲ್ಲಿ ಹಟಾತ್ ಬದಲಾವಣೆ ಮತ್ತೆ ಮಹಾಮಳೆಗೆ ಕಾರಣವಾಗುತ್ತಾ? 

ಮುಂಗಾರು ಚುರುಕಾಗಲು ಪೂರಕವಾದ ವಾತಾವರಣ : 
1.ಎಲ್ ನಿನೋ ಪರಿಣಾಮ ಇದ್ದರೂ, ಹಿಂದೂ ಮಹಾಸಾಗರದಲ್ಲಿನ ಈಗಿನ ಹವಾಮಾನದಲ್ಲಿ ಹಟಾತ್ ಬದಲಾಣೆಯನ್ನು ವಿಶ್ವ ಹವಾಮಾನ ಇಲಾಖೆ ಉಲ್ಲೆಖಿಸಿದೆ. IOD ಅಂದರೆ ಇಂಡಿಯನ್ ಓಷನ್ ಡೈಪೋಲ್ ಸಕಾರಾತ್ಮಕವಾಗಿದ್ದು, ದಕ್ಷಿಣ ಆಫ್ರಿಕಾ 
ತೀರದ ಮೂಲಕ ಅರಬ್ಬಿ ಸಮುದ್ರದ ಕಡೆಗೆ ಹೆಚ್ಚು ತೇವಾಂಶ ಭರಿತ ಮೋಡಗಳನ್ನು ದಕ್ಷಿಣ ದ್ರುವದ ಕಡೆಯಿಂದ ಸಾಗಿಸುತ್ತಿದೆ. 
2. ಜಪಾನ್ ನ ಆಗ್ನೇಯ ಭಾಗದಲ್ಲಿ ಬೃಹತ್ ಚಂಡಮಾರುತ ಹಾಗೂ ಫಿಲಿಪ್ಪೀನ್ಸ್ ಉತ್ತರದಲ್ಲಿ ವಾಯುಭಾರ ಕುಸಿತದ ಪರಿಣಾಮದಿಂದ ಆಸ್ಟ್ರೇಲಿಯಾ ಕಡೆಯಿಂದ ಕಡಿಮೆ ಉಷ್ಣಾಂಶದ ಮಾರತಗಳು ಬೀಸುತ್ತಿದೆ. 
3. ಈ ಜಪಾನ್ ನ ಚಂಡಮಾರುತ ಹಾಗೂ ಫಿಲಿಪ್ಪೀನ್ಸ್ ನ ವಾಯುಭಾರ ಕುಸಿತವು ಬಂಗಾಳಕೂಲ್ಲಿಯ ಗಾಳಿಯನ್ನು ತನ್ನ ಕಡೆಗೆ ಸೆಳೆಯಲ್ಪಡುವುದರಿಂದ ಮುಂಗಾರು ಮಾರುತಗಳ ಚಲನೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ. 
4. ಇವತ್ತು ರಾಜ್ಯದ ಕರಾವಳಿ ಸಮೀಪ ಕೆಳಸ್ತರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದೆ. (ಇವತ್ತು ಸಂಜೆಯ ವೇಳೆಗೆ ಈ ಸುಳಿಗಾಳಿ ಶಿಥಿಲಗೊಳ್ಳುವ ಲಕ್ಷಣಗಳಿವೆ)

ಇದೆಲ್ಲದರ ಪರಿಣಾಮವಾಗಿ ಉತ್ತಮ ಮುಂಗಾರು ಮಳೆ ಮುಂದುವರಿಯುವ ಲಕ್ಷಣಗಳಿವೆ. 

ಆದರೆ ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳನ್ನು ಹೊರತುಪಡಿಸಿ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗದಿರುವುದರ ಹಿಂದಿನ ರಹಸ್ಯ ತಿಳಿಯುತ್ತಿಲ್ಲ. 
ಇವತ್ತಿನಿಂದ ಒಳನಾಡು ಭಾಗಗಳಲ್ಲಿಯೂ ಪರಿಸ್ಥಿತಿ ಬದಲಾಗಬಹುದು. ಹಾಗಾದರೆ ಮಾತ್ರ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಈಗಿನ ಒತ್ತಡದ ಮಳೆಯು ಕಡಿಮೆಯಾಗಬಹುದು. 




No comments:

Post a Comment

24.08.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

24.08.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ...