ರಾಜ್ಯದಾದ್ಯಂತ ನವೆಂಬರ್ 19ರ ತನಕ ಒಣ ಹವೆ ಹಾಗೂ ಛಳಿಯ ವಾತಾವರಣ ಇರಲಿದೆ.
ಈ ಮೊದಲೆ ನಿರೀಕ್ಷಿಸಿದಂತೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿದ್ದು, ನವೆಂಬರ್ 20ರಂದು ತಮಿಳುನಾಡಿನ ವೇಲಂಕಣಿ, ಪಾಂಡಿಚೇರಿ ಮಧ್ಯ ಪ್ರವೇಶಿಸಲಿದೆ. ಇದೇ ವೇಳೆಗೆ ರಾಜ್ಯದ ದಕ್ಷಿಣ ಒಳನಾಡು ಭಾಗಗಳಲ್ಲಿ ಛಳಿ ಕಡಿಮೆಯಾಗಿ ಮೋಡ ಕವಿದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ನವೆಂಬರ್ 21ರಿಂದ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿಯೂ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ನವೆಂಬರ್ 26ರ ತನಕ ಮಳೆಯ ಮುನ್ಸೂಚನೆ ಇದೆ.
ಆಮೇಲೆ ಒಣ ಹವೆ ಮುಂದುವರಿಯಲಿದೆ.
No comments:
Post a Comment