21.11.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ನಿರೀಕ್ಷೆಯಂತೆ ತಮಿಳುನಾಡು, ಪಾಂಡಿಚೇರಿ ಕರಾವಳಿ ಸಮೀಪ ತಲುಪಿದ್ದು, ಉತ್ತರ ಭಾರತದ ಕಡೆಯಿಂದ ಈಗ ಬೀಸುತ್ತಿರುವ ಛಳಿ ಗಾಳಿಯ ತೀವ್ರತೆಯು ವಾಯುಭಾರ ಕುಸಿತಕ್ಕೆ ಭೂಮಿಗೆ ಪ್ರವೇಶಿಸಲು ತಡೆಯಾಗುತ್ತಿದೆ.
ಈಗನ ಮುನ್ಸೂಚನೆಯಂತೆ ವಾಯುಭಾರ ಕುಸಿತವು ನವೆಂಬರ್ 22ರಿಂದ ನಿಧಾನವಾಗಿ ತನ್ನ ತೀವ್ರತೆಯನ್ನು ಕಳೆದುಕೊಳ್ಳುತ್ತಾ ಪಾಂಡಿಚೇರಿ ಕರಾವಳಿಯಲ್ಲಿಯೇ ಶಿಥಿಲಗೊಳ್ಳುವ ಲಕ್ಷಣಗಳಿವೆ.
ಪರಿಣಾಮವಾಗಿ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆಯಾಗುತ್ತಿದೆ.
ನವೆಂಬರ್ 21ರಿಂದ ದಕ್ಷಿಣ ಒಳನಾಡು, ದಕ್ಷಿಣ ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕದ ಭಾಗಗಳಲ್ಲಿ ಛಳಿಯ ತೀವ್ರತೆ ಕಡಿಮೆಯಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆಯೂ ಇದೆ. 22ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಈ ವಾತಾವರಣವು ನವೆಂಬರ್ 25ರಿಂದ ಕಡಿಮೆಯಾಗಿ ಪುನಃ ಛಳಿ ಆರಂಭವಾದರೂ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ನವೆಂಬರ್ 28ರ ತನಕವೂ ಮೋಡ ಅಥವಾ ಅಲ್ಲಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ.
No comments:
Post a Comment