ಕಾಸರಗೋಡು ಹಾಗೂ ದಕ್ಷಿಣ ಕನ್ನಡದ ಅಲ್ಲಲ್ಲಿ ಮೋಡದ ವಾತಾವರಣ ಇರಲಿದ್ದು, ಸಂಜೆ ಸುಬ್ರಹ್ಮಣ್ಯ, ಸುಳ್ಯ ಸುತ್ತಮುತ್ತ ಅಲ್ಲಲ್ಲಿ ತುಂತುರು ಮುನ್ಸೂಚನೆ ಇದೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ.
ಅಂಡಮಾನ್ ಕರಾವಳಿಯಲ್ಲಿ ಈಗ ಉಂಟಾಗುತ್ತಿರುವ ವಾಯುಭಾರ ಕುಸಿತವು ನವೆಂಬರ್ 19ರಂದು ತಮಿಳುನಾಡು ಕರಾವಳಿಗೆ ತಲಪುವ ನಿರೀಕ್ಷೆಯಿದೆ.
ನವೆಂಬರ್ 20ರಿಂದ ದಕ್ಷಿಣ ಒಳನಾಡು ಹಾಗೂ 21 ರಿಂದ ಮಲೆನಾಡು, ಕರಾವಳಿ ಭಾಗಗಳಲ್ಲಿ ಮತ್ತೆ ಮೋಡ, ಮಳೆಯ ಮುನ್ಸೂಚನೆ ಇದೆ. ಈಗಿನ ಪ್ರಕಾರ ನವೆಂಬರ್ 25 ರ ತನಕವೂ ಮಳೆ ಮುಂದುವರಿಯುವ ಲಕ್ಷಣಗಳಿವೆ.
No comments:
Post a Comment