Advertise

18 November 2026

19.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

19.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಸೇರಿದಂತೆ ಕರ್ನಾಟಕದಾದ್ಯಂತ ಅಲ್ಲಲ್ಲಿ ಸಣ್ಣ ಪ್ರಮಾಣದ ಹಗುರ ಮೋಡದ ವಾತಾವರಣದೊಂದಿಗೆ ಛಳಿ ಸಹಿತ ಒಣ ಹವೆ ಮುಂದುವರಿಯಲಿದೆ.

ಅಕ್ವಾನ್ ಚಂಡಮಾರುತವು ಒಡಿಸ್ಸಾ ಕರಾವಳಿಗೆ ತಲಪುವ ಮೊದಲೇ ಅತ್ಯಂತ ದುರ್ಬಲಗೊಳ್ಳಲಿದೆ ಮತ್ತು ನವೆಂಬರ್ 20ರಂದು ಒಡಿಸ್ಸಾದ ಬ್ರಹ್ಮಪುರ ಹಾಗೂ ಪುರಿ ಕರಾವಳಿಯಲ್ಲಿ ಭೂ ಪ್ರವೇಶಿಸಲಿದೆ. ಒಡಿಸ್ಸಾ, ಛತ್ತೀಸಗಡ ದಾಟಿ ಮುಂದೆ ಸಾಗುವ ಸಾಧ್ಯತೆಗಳು ಕಡಿಮೆ ಹಾಗೂ ಅಲ್ಲೇ ಶಿಥಿಲಗೊಳ್ಳಲಿದೆ.
ಹಿಮಾಲಯ ಪರ್ವತ ಪ್ರದೇಶಗಳಿಂದ ಪ್ರಭಲವಾದ ಶೀತ ಮಾರುತಗಳು ಭಾರತದ ದಕ್ಷಿಣ ಕಡೆಗೆ ಬೀಸುತ್ತಿರುವುದರಿಂದ ಅಕ್ವಾನ್ ಚಂಡಮಾರುತವು ಕರಾವಳಿ ಪ್ರದೇಶದಲ್ಲೇ ದುರ್ಬಲಗೊಳ್ಳಲಿದೆ. 

ನವೆಂಬರ್ 20ರ ನಂತರ ಅಕ್ವಾನ್ ಚಂಡಮಾರುತದ ಪ್ರಭಾವದಿಂದ ಉತ್ತರ ಭಾರತ ಕಡೆಯಿಂದ ಬೀಸುತ್ತಿರುವ ಶುಷ್ಕ ಗಾಳಿಯ ಸಂಪೂರ್ಣ ತಡೆಯಲ್ಪಡುವುದರಿಂದ ರಾಜ್ಯದಲ್ಲಿ ಛಳಿ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಗಳಿದ್ದು, ನವೆಂಬರ್ 23ರಿಂದ ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಮಳೆಯ ಸೂಚನೆಗಳಿವೆ. ಈ ಮಳೆಯು ನವೆಂಬರ್ 26 ಅಥವಾ 27ರ ತನಕ ಮುಂದುವರಿಯುವ ಲಕ್ಷಣಗಳಿವೆ. 
ಒಮ್ಮೆ ವಾತಾವರಣದಲ್ಲಿ ಮಳೆಯ ಸಂಬಂಧ ತೇವಾಂಶ ಏರಿಕಯಾದರೆ ಮತ್ತೆ ಛಳಿ ಪ್ರಾರಂಭವಾಗಲು ಸಮಯ ತೆಗೆದುಕೊಳ್ಳಬಹುದು. 


No comments:

Post a Comment

29.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

29.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ...