Advertise

18 November 2026

18.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

18.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದೊಂದಿಗೆ ಒಣ ಹವೆ ಮುಂದುವರಿಯಲಿದೆ. 

ಅಕ್ವಾನ್ ಚಂಡಮಾರುತದ ಪಥವು ಇನ್ನೂ ನಿಗೂಢವಾಗಿದೆ. ನವೆಂಬರ್ 20ರ ರಾತ್ರಿ ಆಂದ್ರಾದ ಓಂಗಾಲು ಹಾಗೂ ನೆಲ್ಲೂರು ಮಧ್ಯ ಭೂ ಪ್ರವೇಶಿಸುವ ಸಾಧ್ಯತೆಗಳಿವೆ ಅಂತಿದ್ದರೂ IMD ನಕ್ಷೆಯಲ್ಲಿ ನವೆಂಬರ್ 19ರಂದು ಒಡಿಸ್ಸಾದ ಭುವನೇಶ್ವರ ಕರಾವಳಿಗೆ ತಲಪುವಂತೆ ತೋರಿಸುತ್ತಿದೆ. 

ಅಕ್ವಾನ್ ಉತ್ತರಕ್ಕೆ ಚಲಿಸಿ ಶಿಥಿಲಗೊಳ್ಳುತ್ತಿದ್ದಂತೆಯೇ ಬಂಗಾಳಕೊಲ್ಲಿಯ ಕಡೆಯಿಂದ ಗಾಳಿಯು ಆಂದ್ರಾ ಮೂಲಕ ರಾಜ್ಯಕ್ಕೆ ಪ್ರವೇಶಿಸುವ ಸಾಧ್ಯತೆಗಳಿರುವುದರಿಂದ ನವೆಂಬರ್ 13ರಿಂದ ರಾಜ್ಯದಲ್ಲಿ ಛಳಿಯ ಪ್ರಮಾಣ ಕಡಿಮೆಯಾಗಿ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆಗಳು ಕಾಣಿಸುತ್ತಿವೆ. 
ಬದಲಾಗಬಹುದು. ಕಾದು ನೋಡಬೇಕಾಗಿದೆ. 




No comments:

Post a Comment

29.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

29.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ...