Advertise

11 November 2026

12.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

12.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಇವತ್ತು ಕಾಸರಗೋಡು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. 
ರಾಜ್ಯದ ಕರಾವಳಿ ಮಲೆನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಂಜೆ ಅಲ್ಲಲ್ಲಿ ಮೋಡದ ವಾತಾವರಣದ ಸಾಧ್ಯತೆಗಳಿದ್ದರೂ ಮಳೆಯ ಲಕ್ಷಣಗಳಿಲ್ಲ. 

ಬಂಗಾಳಕೊಲ್ಲಿಯ "ಅಕ್ವಾನ್" ಚಂಡಮಾರುತವು ಚಲಿಸುವ ಪಥವು ಇನ್ನೂ ಸ್ಥಿರವಾಗಿಲ್ಲ. IMD ಮುನ್ಸೂಚನಾ ನಕ್ಷೆಯಂತೆ ನವೆಂಬರ್ 16 ಅಥವಾ 17ರಂದು ಮ್ಯಾನ್ಮಾರ್ ಕರಾವಳಿಗೆ ತಲಪುವಂತೆ ತೋರಿಸಲಾಗಿದೆ. 
ಇನ್ನು ಕೆಲವು ಹವಾಮಾನ ಸಂಸ್ಥೆಗಳ ಮುನ್ಸೂಚನಾ ನಕ್ಷೆ ಗಳಲ್ಲಿ ನವೆಂಬರ್ 18 ಅಥವಾ 19ರಂದು ಆಂದ್ರಾ ಕರಾವಳಿಗೆ ಪ್ರವೇಶಿಸುವಂತೆ ತೋರಿಸಲಾಗಿದೆ. 

ಆಂದ್ರಾ ಕರಾವಳಿಗೆ ಪ್ರವೇಶಿಸಿದರೂ ಉತ್ತರ ಭಾರತದ ಕಡೆಯಿಂದ ಗಾಳಿ ಸೆಳೆಯಲ್ಪಡುವುದರಿಂದ ರಾಜ್ಯದಲ್ಲಿ ಮಳೆಯ ಸಾಧ್ಯತೆಗಳು ಕಡಿಮೆ ಇರಬಹುದು. 
ಮ್ಯಾನ್ಮಾರ್ ಕಡೆ ಚಲಿಸಿದರೆ ರಾಜ್ಯದಲ್ಲಿ ಒಣ ಹವೆ ಮುಂದುವರಿಯಲಿದೆ. 

ನವೆಂಬರ್ 14ರಂದು ಸರಿಯಾದ ಮಾಹಿತಿ ಸಿಗಬಹುದು. 




No comments:

Post a Comment

16.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

16.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂ...