Advertise

15 November 2026

16.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

16.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಸೇರಿದಂತೆ ರಾಜ್ಯದಾದ್ಯಂತ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಛಳಿಯ ಪ್ರಮಾಣವು ಕಡಿಮೆಯಾಗಲಿದೆ. 

ಅಕ್ವಾನ್ ಚಂಡಮಾರುತದ ಪಥವು ಇನ್ನೂ ನಿಗೂಢವಾಗಿದೆ. 
ನವೆಂಬರ್ 17ರಿಂದ ಫೆಸಿಫಿಕ್ ಮಹಾಸಾಗರದ ಕಡೆಯಿಂದ ಫಿಲಿಪ್ಪೀನ್ಸ್ ದಾಟಿ ಪ್ರಭಲವಾದ ಮಾರುತಗಳು ಬಂಗಾಳಕೊಲ್ಲಿಯ ಕಡೆಗೆ ಸಾಗಿ ಬರುವುದರಿಂದ ಅಕ್ವಾನ್ ಚಂಡಮಾರುತವು ಪೂರ್ವಕ್ಕೆ ಅಥವಾ ಈಶಾನ್ಯ ದಿಕ್ಕಿನಲ್ಲಿ ಸಾಗುವ ಸಾಧ್ಯತೆಗಳು ಕಡಿಮೆ. 
IMD ಮುನ್ಸೂಚನಾ ನಕ್ಷೆಯಲ್ಲಿ ನವೆಂಬರ್ 17 ಅಥವಾ 18ರಂದು ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ ಕರಾವಳಿಯ ಗಡಿ ಕಡೆ ತಲಪುವಂತೆ ಕಾಣಿಸಲಾಡಿದೆ. 
ಇನ್ನು ಕೆಲವು ಹವಾಮಾನ ಸಂಸ್ಥೆಗಳ ಮುನ್ಸೂಚನಾ ನಕ್ಷೆ ಗಳಲ್ಲಿ ನವೆಂಬರ್ 19, 20ರ ಸುಮಾರಿಗೆ ಆಂದ್ರಾದ ನೆಲ್ಲೂರು ಹಾಗೂ ತಮಿಳುನಾಡಿನ ಚೆನೈ ಮಧ್ಯ ಪ್ರವೇಶಿಸುತ್ತಿರುವಂತೆ ತೋರಿಸಲಾಗಿದೆ. 

ಅಕ್ವಾನ್ ಅಂದ್ರಾ ಕರಾವಳಿ ಪ್ರವೇಶಿಸಿದರೆ ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ನವೆಂಬರ್ 21ರ ನಂತರ ಮಳೆಯ ಸಾಧ್ಯತೆ ಇರಬಹುದು. 

No comments:

Post a Comment

16.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

16.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂ...