ಇವತ್ತು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಆವರಿಸುವ ಮುನ್ಸೂಚನೆ ಇದೆ.
ಕೊಡಗು ಜಿಲ್ಲೆಯ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆ ಇದೆ. ರಾತ್ರಿ ಛಳಿಯ ವಾತಾವರಣ ಆರಂಭವಾಗುವ ಸಾಧ್ಯತೆಗಳಿವೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಛಳಿ ಸ್ವಲ್ಪ ಹೆಚ್ಚಿರಬಹುದು. ಹಗಲಿನ ಉಷ್ಣಾಂಶ ಸಾಮಾನ್ಯಕ್ಕಿಂತ ಸ್ವಲ್ಪ ಮಟ್ಟಿಗೆ ಏರಿಕೆಯಾಗುವ ಸಾಧ್ಯತೆಗಳಿವೆ.
ಈಗಾಗಲೇ ಉತ್ತರ ಫೆಸಿಫಿಕ್ ಸಾಗರದ ಕಡೆಯಿಂದ ಬಂಗಾಳಕೊಲ್ಲಿಯ ಕಡೆಗೆ ಪ್ರಭಲವಾದ ಗಾಳಿಯ ಚಲನೆ ಆರಂಭವಾಗಿದ್ದು, ಇನ್ನೆರಡು ದಿನಗಳಲ್ಲಿ ಹಿಂದೂಮಹಾಸಾಗರದ ಕಡೆಯಿಂದ ಶ್ರೀಲಂಕಾ ದಕ್ಷಿಣ ಕರಾವಳಿಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಪ್ರಭಲ ಗಾಳಿ ಚಲಿಸಲು ಆರಂಭವಾಗಲಿದೆ.
ಇದರ ಪರಿಣಾಮದಿಂದ ಶ್ರೀಲಂಕಾ ಆಗ್ನೇಯ (ಪೂರ್ವ - ದಕ್ಷಿಣ) ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿವೆ. ಇದು ನವೆಂಬರ್ 14 ಅಥವಾ 15ರ ಸುಮಾರಿಗೆ ಚಂಡಮಾರುತವಾಗಿ ಪರಿವರ್ತನೆಗೊಳ್ಳವ ಲಕ್ಷಣಗಳೂ ಇವೆ. ಚಲಿಸುವ ಪಥ ನಿಶ್ಚಿತವಾಗಿಲ್ಲ. ಈಗಿನಂತೆ ನವೆಂಬರ್ 19ರ ಸುಮಾರಿಗೆ ಆಂದ್ರಾ ಕರಾವಳಿ ಸಮೀಪ ತಲಪುವ ನಿರೀಕ್ಷೆ ಇದೆ. ಪರಿಸ್ಥಿತಿ ಕಾದು ನೋಡಬೇಕಾಗಿದೆ
No comments:
Post a Comment