Advertise

20 November 2026

21.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

21.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಸೇರಿದಂತೆ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ. ನಾಳೆ ಮುಂಜಾನೆಯಿಂದಲೇ ರಾಜ್ಯದಾದ್ಯಂತ ಛಳಿಯ ಪ್ರಮಾಣ ನಿಧಾನವಾಗಿ ಕಡಿಮೆಯಾಗುವ ಸೂಚನೆಗಳಿವೆ.

ಅಕ್ವಾನ್ ಚಂಡಮಾರುತವು ನಿರೀಕ್ಷೆಯಂತೆ ಒಡಿಸ್ಸಾದ ಪುರಿ ಹಾಗೂ ಬ್ರಹ್ಮಪುರ ಕರಾವಳಿಯಲ್ಲಿ ದುರ್ಬಲಗೊಂಡು ಪ್ರವೇಶಿಸಿದೆ. 
ಇನ್ನೆರಡು ದಿನಗಳಲ್ಲಿ ಸಂಪೂರ್ಣವಾಗಿ ಶಿಥಿಲಗೊಳ್ಳಲಿದೆ.
ಇದರ ಪರಿಣಾಮದಿಂದ ಉತ್ತರ ಭಾರತದಿಂದ ದಕ್ಷಿಣ ಕಡೆಗೆ ಈಗ ಬೀಸುತ್ತಿರುವ ಶೀತ ಗಾಳಿಯು ಸಂಪೂರ್ಣ ತಡೆಯಲ್ಪಟ್ಟು, ಬಂಗಾಳಕೊಲ್ಲಿಯ ಹಿಂಗಾರು ಮಾರುತಗಳು ಪ್ರಭಲಗೊಳ್ಳುವ ಸೂಚನೆಗಳಿವೆ. 

ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಜಿಲ್ಲೆಗಳಲ್ಲಿ ನವೆಂಬರ್ 23ರಿಂದ ಹಾಗೂ 24ರಿಂದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಆರಂಭವಾಗುವ ಸೂಚನೆಗಳಿವೆ. ನವೆಂಬರ್ 27ರ ತನಕ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. 
ಮಳೆಯ ಕಾರಣದಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗುವುದರಿಂದ ಮತ್ತೆ ಛಳಿ ಆರಂಭವಾಗಲು ಕೆಲವು ದಿನಗಳು ಬೇಕಾಗಬಹುದು. 

ನವೆಂಬರ್ 25 ನಂತರ ಬಂಗಾಳಕೊಲ್ಲಿಯ ಉತ್ತರ ಸುಮಾತ್ರ ಕರಾವಳಿಯಲ್ಲಿ ಇನ್ನೊಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ನವೆಂಬರ್ದ ಕೊನೇಯಲ್ಲಿ ದಕ್ಷಿಣ ಶ್ರೀಲಂಕಾ ಕರಾವಳಿ ದಾಟಿ ಅರಬ್ಬಿ ಸಮುದ್ರ ಪ್ರವೇಶಿಸುವ ಸಾಧ್ಯತೆಗಳಿವೆ. 


No comments:

Post a Comment

29.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

29.11.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ...