28.09.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ಕರ್ನಾಟಕದಾದ್ಯಂತ ಒಣ ಹವೆ ಆವರಿಸಲಿದೆ.
ಆದರೂ ಕೊಡಗಿನ ಒಂದೆರಡು ಕಡೆ ಹಾಗೂ ಚಿಕ್ಕಮಗಳೂರಿನ ಕುದುರೆಮುಖ, ಬಾಳೆಹೊನ್ನೂರು, ಮೂಡಿಗೆರೆ ಸುತ್ತಮುತ್ತ ಭಾಗಗಳಲ್ಲಿ ತುಂತುರು ಮಳೆಯ ಸಾಧ್ಯತೆಗಳಿವೆ.
ಸೆಪ್ಟೆಂಬರ್ 28 ಅಥವಾ 29ರಂದು ಮಧ್ಯಮ ಸ್ತರದಲ್ಲಿ ಈಗಿನ ವಾಯುಭಾರ ಕುಸಿತಗಳು
ಶಿಥಿಲಗೊಳ್ಳುವ ಲಕ್ಷಣಗಳಿವೆ.
ಶಿಥಿಲಗೊಳ್ಳುವ ಲಕ್ಷಣಗಳಿವೆ.
ಇದರೊಂದಿಗೆ ಸೆಪ್ಟೆಂಬರ್ 28ರಿಂದ ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ದಕ್ಷಿಣ ಕರಾವಳಿಯ ಮೂಲಕ ಬಂಗಾಳಕೊಲ್ಲಿ ಪ್ರವೇಶಿಸಿ, ತಮಿಳುನಾಡು ಕರಾವಳಿ ಮೂಲಕ ಭೂ ಪ್ರವೇಶಿಸಲಿದೆ. ಇದರ ಪರಿಣಾಮದಿಂದ ರಾಜ್ಯದಲ್ಲಿ ಹಿಂಗಾರು ರೀತಿಯ ಗುಡುಗು ಸಹಿತ ಮಳೆಯಾಗುವ ಲಕ್ಷಣಗಳಿವೆ.
ರಾಜ್ಯದಿಂದ ಮುಂಗಾರು ಅಧಿಕೃತವಾಗಿ ಒಕ್ಟೊಬರ್ 15ರ ಸುಮಾರಿಗೆ ಹಿಂದೆ ಸರಿಯಲಿದ್ದು, ನಂತರ ಹಿಂಗಾರು ಮಳೆ ಅಧಿಕೃತವಾಗಿ ಆರಂಭವಾಗಬೇಕಿದೆ.
No comments:
Post a Comment