Advertise

13 September 2026

14.09.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

14.09.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಸೇರಿದಂತೆ ರಾಜ್ಯದಾದ್ಯಂತ ಮಳೆ ಕಡಿಮೆಯಾಗಿದ್ದು, ಅಧಿಕ ತಾಪಮಾನದೊಂದಿಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. 
ಆದರೂ ಕೊಡಗು ಜಿಲ್ಲೆಯ ಮಡಿಕೇರಿ ಸುತ್ತಮುತ್ತ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬಾಳೆಹೊನ್ನೂರು ಸುತ್ತಮುತ್ತ, ಚಾಮರಾಜನಗರದ ಕೊಳ್ಳೇಗಾಲ ಸುತ್ತಮುತ್ತ, ಗುಲ್ಬರ್ಗ ಜಿಲ್ಲೆಯ ಅಲ್ಲಲ್ಲಿ ಒಂದೆರಡು ತುಂತುರು ಮಳೆಯ ಮುನ್ಸೂಚನೆ ಇದೆ. 

ಶ್ರೀಲಂಕಾ ಪಶ್ಚಿಮ ಕರಾವಳಿಯಲ್ಲಿ ಈಗಾಗಲೇ ಸಣ್ಣ ಪ್ರಮಾಣದ ತಿರುಗುವಿಕೆ ಆರಂಭವಾಗಿದ್ದು, ಮುಂದೆ ಪ್ರಭಲಗೊಂಡು, ಶ್ರೀಲಂಕಾ ದಕ್ಷಿಣ ಕರಾವಳಿಯ ಮೂಲಕ ಬಂಗಾಳಕೊಲ್ಲಿಯ ಅಂಡಮಾನ್ ಕಡೆಗೆ ಸಾಗುವ ನಿರೀಕ್ಷೆ ಇದೆ. ಸೆಪ್ಟೆಂಬರ್ 18ರಂದು ಅಂಡಮಾನ್ ಉತ್ತರ ಭಾಗದಲ್ಲಿ ಇನ್ನೊಂದು ತಿರುಗುವಿಕೆ ಆರಂಭವಾಗುವ ಸಾಧ್ಯತೆಗಳಿವೆ.
ಈಗಿನ ವಾಯುಭಾರ ಕುಸಿತವು ಬಂಗಾಳಕೂಲ್ಲಿಯ ಕಡೆಗೆ ಸಾಗುವ ನಿರೀಕ್ಷೆ ಇರುವುದರಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳು ಕಡಿಮೆಯಾಗಿದ್ದು, ಸೆಪ್ಟೆಂಬರ್ 18ರ ಅಂಡಮಾನ್ ಸಮೀಪದ ವಾಯುಭಾರ ಕುಸಿತದಿಂದ ಸೆಪ್ಟೆಂಬರ್ 21ರ ಸುಮಾರಿಗೆ ಮಳೆಯಾಗುವ ನಿರೀಕ್ಷೆಗಳಿವೆ. 

ಈಗಿನ ಶ್ರೀಲಂಕಾದ ವಾಯುಭಾರ ಕುಸಿತದಿಂದ 
ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 14ರಿಂದ ಹಾಗೂ ಅಂಡಮಾನ್ ಸಮೀಪದ ತಿರುವಿಕೆಯಿಂದ ಸೆಪ್ಟೆಂಬರ್ 18ರಿಂದ ಮಲೆನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ, ಸೆಪ್ಟೆಂಬರ್ 21ರಿಂದ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆರಂಭವಾಗುವ ಸಾಧ್ಯತೆಗಳಿವೆ. 

ಆದರೆ ಈ ವಾಯುಭಾರ ಕುಸಿತದ ಚಲನೆಯ ದಿಕ್ಕು ಬದಲಾದರೆ ಮಳೆಯಾಗುವ ಈ ಎಲ್ಲಾ ಮುನ್ಸೂಚನೆಗಳು ಬದಲಾಗಬಹುದು. 

No comments:

Post a Comment

22.09.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

22.09.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಅರಬ್ಬಿ...