ಕರ್ನಾಟಕ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದ್ದು, ಬಿಸಿಲು, ಹಗಲಿನ ಅಧಿಕ ತಾಪಮಾನ ಹಾಗೂ ಅಲ್ಲಲ್ಲಿ ಸಣ್ಣ ಪ್ರಮಾಣದ ಮೋಡದ ವಾತಾವರಣ ಮುನ್ಸೂಚನೆ ಇದೆ.
ಗುಜರಾತ್ ಬಳಿ ಮಧ್ಯಮ ಸ್ತರದಲ್ಲಿ ಹಾಗೂ ಮೇಲ್ಸ್ತರದಲ್ಲಿ ಉಷ್ಣ ಮಾರುತ ಪರಿಚಲನೆ (anti cyclonic circulation) ಮುಂದುವರಿದಿದ್ದರ ಪರಿಣಾಮದಿಂದ ಉತ್ತರ ಭಾರತದ ಕಡೆಯಿಂದ ಬಿಸಿ ಹಾಗೂ ಶುಶ್ಕ ಗಾಳಿ ಬೀಸುತ್ತಿದೆ.
ಈ ಪರಿಚಲನೆ ಇರುವಷ್ಟು ಸಮಯವೂ ರಾಜ್ಯದಲ್ಲಿ ಮಳೆಯ ಸಾಧ್ಯತೆಗಳು ಗೋಚರಿಸುತ್ತಿಲ್ಲ. ಈ ಪರಿಚಲನೆಯು ಮುಂದಿನ 10 ದಿನಗಳವರೆಗೂ ಮುಂದುವರಿಯುವ ಲಕ್ಷಣಗಳಿವೆ.
No comments:
Post a Comment