ಕಾಸರಗೋಡು ಸೇರಿದಂತೆ ರಾಜ್ಯದಾದ್ಯಂತ ಉತ್ತಮ ಛಳಿ ಹಾಗೂ ಒಣ ಹವೆ ಮುಂದುವರಿಯಲಿದೆ.
ಮಧ್ಯಮ ಸ್ತರದ ಗಾಳಿಯು ಗುಜರಾತ್ ಹಾಗೂ ರಾಜಸ್ಥಾನ ಕೇಂದ್ರಿಕರಿಕೊಂಡು ಬೃಹತ್ ಗಾತ್ರದಲ್ಲಿ ತಿರುಗುತ್ತಿದ್ದ ಪರಿಣಾಮದಿಂದ ಉತ್ತರ ಭಾರತದ ಕಡೆಯಿಂದ ಶೀತ ಮಾರುತಗಳು ಬಲವಾಗಿ ಬೀಸುತ್ತಿದೆ ಹಾಗೂ ರಾಜ್ಯದ ವಾತಾವರಣ ಉಷ್ಣಾಂಶ ತೀವ್ರವಾಗಿ ಕುಸಿದಿದೆ.
ಈಗಿನಂತೆ ಡಿಸೆಂಬರ್ 15ರಿಂದ ಈ ತಿರುಗುವಿಕೆಯು ಮತ್ತಷ್ಟು ವಿಸ್ತಾರಗೊಂಡು ಬಂಗಾಳಕೊಲ್ಲಿಯ ತನಕ ತಲಪುವ ನಿರೀಕ್ಷೆಯಿದೆ. ಈ ಗಾಳಿಯು ಬಂಗಾಳಕೊಲ್ಲಿಯ ಕಡೆಯಿಂದ ಬೀಸಿದರೆ, ವಾತಾವರಣದ ಉಷ್ಣಾಂಶ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿ, ಡಿಸೆಂಬರ್ 15ರಿಂದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿಯ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಸಾಧ್ಯತೆಗಳಿವೆ.
ಡಿಸೆಂಬರ್ 16 ರಿಂದ 18ರ ತನಕ ದಕ್ಷಿಣ ಒಳನಾಡು ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ.
No comments:
Post a Comment