ಇವತ್ತು ರಾಜ್ಯದಾದ್ಯಂತ ಬಿಸಿಲು ಹಾಗೂ ಅಲ್ಲಲ್ಲಿ ಸಣ್ಣ ಪ್ರಮಾಣದ ಮೋಡದ ವಾತಾವರಣದ ಮುನ್ಸೂಚನೆ ಇದೆ. ಎಲ್ಲಿಯೂ ಮಳೆಯ ಸಾಧ್ಯತೆ ಕಾಣಿಸುತ್ತಿಲ್ಲ.
ಅರಬ್ಬಿ ಸಮುದ್ರದ ಒಮಾನ್ ಕರಾವಳಿಯಲ್ಲಿದ್ದ ವಾಯುಭಾರ ಕುಸಿತವು ಶಿಥಿಲಗೊಂಡಿದ್ದು, ಇದರ ಜೊತೆಗೆ ಮುಂಗಾರು ಹಿಂದೆ ಸರಿದಿದೆ. ಆದರೆ ಅಧಿಕೃತವಾಗಿ ಹವಾಮಾನ ಇಲಾಖೆ ಪ್ರಕಟಿಸಬೇಕಗಿದೆ.
ಇದರ ಜೊತೆಗೆ ಬಾಂಗ್ಲಾದೇಶ, ಪಶ್ಚಿಮ ಬಂಗಾಳ ಕಡೆಯಿಂದ ಬಂಗಾಳಕೊಲ್ಲಿಯ ಮೂಲಕ ಹಿಂಗಾರು ಮಾರುತಗಳು ಬರಲಾರಂಭಿಸಿದ್ದು, ಒಕ್ಟೊಬರ್ 13ರಂದು ದಕ್ಷಿಣ ಒಳನಾಡಿನ ಮೂಲಕ ರಾಜ್ಯಕ್ಕೆ ಪ್ರವೇಶಿಸಲಿದೆ.
ಒಕ್ಟೊಬರ್ 14ರಂದು ಕರಾವಳಿ ಭಾಗಗಳಲ್ಲಿ ಹಿಂಗಾರು ಮಳೆ ಆರಂಭವಾಗುವ ಸಾಧ್ಯತೆಗಳಿವೆ. ಒಕ್ಟೊಬರ್ 15ರಿಂದ ಉತ್ತರ ಒಳನಾಡು ಭಾಗಗಳಲ್ಲಿಯೂ ಹಿಂಗಾರು ಮಳೆ ಆರಂಭವಾಗುವ ಮುನ್ಸೂಚೆನೆ ಇದೆ.
No comments:
Post a Comment