ಕರಾವಳಿ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಸ್ವಲ್ಪ ಮಟ್ಟಿಗೆ ಛಳಿ ಪ್ರಮಾಣವು ಕಡಿಮೆಯಾಗಿದ್ದು ಒಣ ಹವೆ ಮುಂದುವರಿಯಲಿದೆ.
ಈಗಿನಂತೆ ಡಿಸೆಂಬರ್ 22ರಿಂದ ಅಲ್ಲಲ್ಲಿ ಮೋಡದ ವಾತಾವರಣದ ಸಾಧ್ಯತೆಗಳಿದ್ದು, ಸೆಖೆ ಆರಂಭವಾಗುವ ಲಕ್ಷಣಗಳಿವೆ. 25ರಿಂದ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆಯೂ ಇದೆ.
ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ.
ಈಗಿನಂತೆ ಛಳಿಯ ಪ್ರಮಾಣ ಈಗಾಗಲೇ ಕಡಿಮೆಯಾಗಿದ್ದು, ಡಿಸೆಂಬರ್ 22ರಿಂದ ಮೋಡದ ವಾತಾವರಣದ ಜೊತೆಗೆ ತುಂತುರು ಮಳೆಯ ಸಾಧ್ಯತೆ ಇದೆ.
ಒಳನಾಡು : ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿಯಲಿದ್ದು, ಛಳಿಯ ಪ್ರಮಾಣ ಹೆಚ್ಚಿರಬಹುದು.
ದಕ್ಷಿಣ ಒಳನಾಡಿನ ಛಳಿಯ ಪ್ರಮಾಣವು ಕಡಿಮೆಯಾಗಿದ್ದು ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಹಗುರ ಮೋಡದ ವಾತಾವರಣದ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ..
ಕೋಲಾರದ ತಮಿಳುನಾಡು ಹಾಗೂ ಆಂದ್ರಾ ಗಡಿಭಾಗಗಳ ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ಉತ್ತರ ಒಳನಾಡಿನಲ್ಲಿ ಡಿಸೆಂಬರ್ 22ರಿಂದ ಛಳಿಯ ಪ್ರಮಾಣವು ಕಡಿಮೆಯಾಗುವ ಸಾಧ್ಯತೆಗಳಿದ್ದು, 25 ಅಥವಾ 26ರಿಂದ ಮೋಡದ ವಾತಾವರಣದ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಲಕ್ಷಣಗಳಿವೆ.
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಈಶಾನ್ಯಕ್ಕೆ ಚಲಸುತ್ತಿದ್ದರೂ ನಿಧಾನ ಗತಿಯಲ್ಲಿದೆ. ಶಿಥಿಲಗೊಳ್ಳಲು ಸಮಯ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಡಿಸೆಂಬರ್ 22ರಿಂದ ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯ ಗಾಳಿಯು ಭೂಪ್ರವೇಶಿಸಿ ಜೊತೆಯಾಗಿ ಉತ್ತರ ಭಾರತದ ಕಡೆಗೆ ಚಲಿಸುವುದರಿಂದ ರಾಜ್ಯದಾದ್ಯಂತ ಛಳಿಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳೊಂದಿಗೆ ಅಲ್ಲಲ್ಲಿ ಮಳೆಯ ವಾತಾವರಣವು ಸೃಷ್ಠಿಯಾಗುವ ಸಾಧ್ಯತೆಗಳಿವೆ.
ಇದರೊಂದಿಗೆ ಉತ್ತರ ರಾಜಸ್ಥಾನದಲ್ಲಿ ತಿರುಗುವಿಕೆ ಆರಂಭವಾಗುವ ಲಕ್ಷಣಗಳಿದ್ದು. ಉತ್ತರ ಭಾರತದ ಹಲವು ಕಡೆ ಡಿಸೆಂಬರ್ 24ರ ನಂತರ ಮಳೆಯ ಮುನ್ಸೂಚೆನೆ ಇದೆ.
No comments:
Post a Comment