Advertise

23 August 2023

24.08.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

24.08.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಅಲ್ಲಲ್ಲಿ ಆಗಾಗ್ಗೆ ಸ್ವಲ್ಪ ಮೋಡವಿದ್ದರೂ ಮಳೆಯ ಲಕ್ಷಣಗಳಿಲ್ಲ. 

ಭಾರತದ ಪೂರ್ವ ಭಾಗಗಳಲ್ಲಿ ಮಾತ್ರ ಉತ್ತಮ ಮಳೆಯಾಗುತ್ತಿದೆ.

ಈಗಿನ ಮುನ್ಸೂಚನೆಯಂತೆ ವಾತಾವರಣದ ಅಧಿಕ ತಾಪಮಾನದಿಂದಾಗಿ ಆಗಷ್ಟ್ 26ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ. 

ಮುಂಗಾರು ತೀರಾ ದುರ್ಬಲಗೊಂಡಿದ್ದರಿಂದ ಕರಾವಳಿ ಭಾಗಗಳಲ್ಲಿ ಪಶ್ಚಿಮದ ಮಳೆ ಕೊರತೆಯಾಗಲಿದೆ. ಪೂರ್ವದ ಮಳೆ ಅಂದರೆ ಹಿಂಗಾರು ರೀತಿಯ ಮಳೆಗೆ ಇನ್ನೂ ಸಮಯವಿರುವುದರಿಂದ ನೀರಿನ ಸಮಸ್ಯೆ ತಲೆದೋರರುವ ಲಕ್ಷಣಗಳಿವೆ. 

ಕರಾವಳಿ ಮಾತ್ರವಲ್ಲದೇ ರಾಜ್ಯದಾದ್ಯಂತ ಮುಂಗಾರಿನ ತೀವ್ರ ಕೊರತೆ ಉಂಟಾಗಿದೆ. ನೀರಿನ ಮಿತಬಳಕೆಯ ಆವಶ್ಯಕತೆ ಇದೆ



No comments:

Post a Comment

19.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

19.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ...