04.08.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಬಿಸಿಲು, ಅಲ್ಲಲ್ಲಿ ಮೋಡ, ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಹಗುರವಾಗಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಮುಂಗಾರು ಅತಿ ದುರ್ಬಲವಾಗಿದ್ದು, ಕರಾವಳಿಯಲ್ಲಿ ಅಲ್ಲಲ್ಲಿ ಆಗಷ್ಟ್ 5ರ ತನಕ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಆಗಷ್ಟ್ 6ರಿಂದ ಕರಾವಳಿ ಭಾಗಗಳಲ್ಲಿಯೂ ಮಳೆ ಸಾಂಕೇತಿಕವಾಗಿ ಒಂದೆರಡು ಸಾಮಾನ್ಯ ಮಳೆ ಮಾತ್ರ ಇರಬಹುದು. ಈಗಿನ ಮುನ್ಸೂಚನೆಯಂತೆ ಮುಂದಿನ 10 ದಿನಗಳವರೆಗೂ ಮುಂಗಾರು ಚುರುಕಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿಯಲ್ಲಿ ಉಓಟಾಗಿದ್ದ ವಾಯುಭಾರ ಕುಸಿತದ ಉಳಿಕೆ ಅಂಶವು ಮಧ್ಯಪ್ರದೇಶ, ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿದ್ದು, ಉತ್ತಮ ಮಳೆಯ ಮುನ್ಸೂಚನೆ ಇದೆ. ಮಧ್ಯಪ್ರದೇಶದ ಜಗಲ್ಪುರ ಸುತ್ತಮುತ್ತ ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ (red alert). ಜಾರ್ಖಂಡ್ ನಲ್ಲೂ ಮಳೆಯ ಮುನ್ಸೂಚನೆ ಇದೆ.
No comments:
Post a Comment