ಕಾಸರಗೋಡು ಅಲ್ಲಲ್ಲಿ, ರಾಜ್ಯದ ಕರಾವಳಿ ತೀರ ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಉಳಿದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಅವಧಿ ಮೋಡ ಕವಿದ ವಾತಾವರಣದೊಂದಿಗೆ ಹೆಚ್ಚಿನ ಕಡೆ ತುಂತುರು ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಕೊಡಗು, ಚಿಕ್ಕಮಗಳೂರು ಒಂದೆರಡು ಕಡೆ, ರಾಯಚೂರು, ವಿಜಯಪುರ, ಚಿಕ್ಕಬಳ್ಳಾಪುರ ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಹಗುರವಾಗಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ತಾಪಮಾನ ಏರಿಕೆಯಿಂದ ಒಂದೆರಡು ಕಡೆ ಅನಿರೀಕ್ಷಿತ ಮಳೆಯ ಸಾಧ್ಯತೆಯೂ ಇದೆ.
ಮುಂಗಾರು ಹಾಗೂ ಚಂಡಮಾರುತ :
ಅರಬ್ಬಿ ಸಮುದ್ರದ ಚಂಡಮಾರುತವು ಉತ್ತರಕ್ಕೆ ಚಲಿಸುತ್ತಿದ್ದು ಜೂನ್ 14ರ ಸಂಜೆ ಅಥವಾ ರಾತ್ರಿ ಪಾಕಿಸ್ತಾನ ಕರಾವಳಿಯ ಒರ್ಮಾರಾ ಹಾಗೂ ಕರಾಚಿಯ ಮಧ್ಯ ಅಪ್ಪಳಿಸುವ ಲಕ್ಷಣಗಳಿವೆ.
ಮುಂಗಾರು ಈಗಾಗಲೇ ರಾಜ್ಯದ ಕರಾವಳಿಗೂ ಆಗಮಿಸಿದ್ದು ರಾಜ್ಯದ ಕರಾವಳಿಯ ಹಲವೆಡೆ ಮಳೆಯ ಮುನ್ಸೂಚನೆ ಇದೆ. ಈಗಿನ ಮುಂಗಾರು ಕರಾವಳಿ ತೀರ ಭಾಗಗಳಗೆ ಮಾತ್ರ ಸೀಮಿತವಾಗಿದೆ. ಚಂಡಮಾರುತ ಅಪ್ಪಳಿಸಿ ದುರ್ಬಲಗೊಳ್ಳುತ್ತಿರುವಂತಯೇ ಮುಂಗಾರು ಸ್ವಲ್ಪ ಚುರುಕಾಗುವ ಲಕ್ಷಣಗಳಿವೆ. ಆದರೂ ಜೂನ್ ತಿಂಗಳ ಮುಂಗಾರು ದುರ್ಬಲವಾಗಿರುವ ಸಾಧ್ಯತೆ ಹೆಚ್ಚಿದೆ.

No comments:
Post a Comment