07.06.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ್ಯಂತ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ.
ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು ಭಾಗಗಳಲ್ಲಿ ಸಹ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ.
ಹಾಸನ, ಮಂಡ್ಯ, ತುಮಕೂರು, ಚಿಕ್ಕನಾಯಕನಹಳ್ಳಿ,ತಿಪಟೂರು, ತುರುವೆಕೆರೆ ಸುತ್ತಮುತ್ತ ಉತ್ತಮ ಮಳೆಯ ಮುನ್ಸೂಚನೆ ಇದೆ. ಆದರೆ ವಾಯುಭಾರ ಕುಸಿತದ ಪರಿಣಾಮದಿಂದ ಈ ಮಳೆಯ ಸಾಧ್ಯತೆ ಕಡಿಮೆ ಇರಬಹುದು. ಗಾಳಿಯ ಪಾತ್ರ ಮಹತ್ವದ್ದು. ಮೋಡವಿದ್ದರೂ ಗಾಳಿಯ ಒತ್ತಡ ಕಡಿಮೆ ಇದ್ದರೆ ಮಳೆಯ ಸಾಧ್ಯತೆ ಕಡಿಮೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಹಗುರವಾಗಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ತಾಪಮಾನ ಏರಿಕೆಯಿಂದ ಮುನ್ಸೂಚನೆಗೆ ಸಿಗದೆ ಕೆಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆ ಸಾಧ್ಯತೆ ಇದೆ. ಗಾಳಿಯ ಬಗ್ಗೆ ಎಚ್ಚರವಿರಲಿ
ಮುಂಗಾರು ಮತ್ತು ವಾಯುಭಾರ ಕುಸಿತ :
ಈಗಾಗಲೇ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಉಂಟಾಗಿದ್ದು, ನಾಳೆ ಅಥವಾ ನಾಡಿದ್ದು ಚಂಡಮಾರುತವಾಗಿ ಪರಿವರ್ತನೆಗೊಳ್ಳವ ಸಾಧ್ಯತೆ ಇದೆ. ಉತ್ತರಕ್ಕೆ ಚಲಿಸಿ ಪಾಕಿಸ್ತಾನಕ್ಕೆ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ.
ಮುಂಗಾರು ಸ್ಥಿತಿ ನಿನ್ನೆಯ ತನಕ ಮುಂದುವರಿದಲ್ಲಿಂದ ವಾಯುಭಾರ ಕುಸಿತ ಪರಿಣಾಮವಾಗಿ ಹಿಂದೆ ಸರಿದಿದ್ದು, ವಾಯುಭಾರ ಕುಸಿತವು ಉತ್ತರಕ್ಕೆ ಚಲಿಸುವ ತನಕ ಇದೇ ಪರಿಸ್ಥಿತಿ ಮುಂದುವರಿಯುವ ಲಕ್ಷಣಗಳಿವೆ.
No comments:
Post a Comment