Advertise

21 May 2023

22.05.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

22.05.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡಿನ ಮುಳ್ಳೇರಿಯ ಸುತ್ತಮುತ್ತ, ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ, ಕಾರ್ಕಳ ಸುತ್ತಮುತ್ತ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಗಾಳಿ ಪ್ರಮುಖ ಪಾತ್ರ ವಹಿಸಲಿದೆ

ಕೊಡಗು ಉತ್ತಮ, ಸೋಮವಾರಪೇಟೆ, ಸಕಲೇಶಪುರ, ಮೂಡಿಗೆರೆ, ಶಿೃಂಗೇರಿ, ಕೊಪ್ಪ, ಕುದುರೆಮುಖ, ಆಗುಂಬೆ ಸುತ್ತಮುತ್ತ ಭಾಗಗಳಲ್ಲಿ ಸಹ ಮಳೆಯ ಮುನ್ಸೂಚನೆ ಇದೆ. 

ಚಾಮರಾಜನಗರ, ಮೈಸೂರು ಅಲ್ಲಲ್ಲಿ, ಬೆಂಗಳೂರು  ಹಾಗೂ ತುಮಕೂರು ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. 

ಉಳಿದ ದಕ್ಷಿಣ ಒಳನಾಡು ಭಾಗಗಳ ಹೆಚ್ಚಿನ ಕಡೆ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. 
ಗಾಳಿಯ ಪಾತ್ರ ಮಹತ್ವದ್ದು. 

ಮಲೆನಾಡು, ದಕ್ಷಿಣ ಒಳನಾಡು ಹಾಗೂ ದಕ್ಷಿಣ ಕರಾವಳಿ ಭಾಗಗಳಲ್ಲಿ ಅಲ್ಲಲ್ಲಿ ಮುಂಗಾರು ಪೂರ್ವ ಮಳೆಯು ಮುಂದುವರಿಯಲಿದೆ. 
 
ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಹಗುರವಾಗಿ ಮೋಡ ಕವಿದ ವಾತಾವರಣದ ಮುನ್ಸೂಚನೆ ಇದೆ. 

ಮುಂಗಾರು ಸ್ಥಿತಿ : IMD ವರದಿಯಂತೆ ಅಂಡಮಾನ್ ಗೆ ಈಗಾಗಲೇ ಮುಂಗಾರು ತಲುಪಿದ್ದು ಜೂನ್ 4 ರ ಆಸುಪಾಸು ಕೇರಳಕ್ಕೆ ಪ್ರವೇಶಿಸುವ ಸಾಧ್ಯತೆ ತಿಳಿಸಿದೆ.
ಆದರೆ ಅರಬ್ಬಿ ಸಮುದ್ರದಲ್ಲಿ ಮುಂಗಾರಿಗೆ ಪೂರಕವಾದ ಗಾಳಿಯ ಚಟುವಟಿಕೆಗಳು ಇನ್ನೂ ಚುರುಕಾಗಬೇಕಾಗಿದೆ.
ಹಿಂದೂಮಹಾಸಾಗರದ ಈಗಿನ ಚಂಡಮಾರುತವು ಮುಂಗಾರು ಮುನ್ನಡೆಗೆ ಸ್ವಲ್ಪ ಮಟ್ಟಿಗೆ ತೊಡಕಾಗಿದೆ.
ಅಂತೂ ಜೂನ್ ತಿಂಗಳಲ್ಲಿ ಆರಂಭಿಕ ಮುಂಗಾರು ದುರ್ಬಲವಾಗಿರುವ ಸಾಧ್ಯತೆ ಹೆಚ್ಚಿದೆ. 

No comments:

Post a Comment

20.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

20.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರ್ನಾಟಕ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ...