04.05.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಇರಲಿದ್ದು, ಸಂಜೆ, ರಾತ್ರಿ ಘಟ್ಟ ಕೆಳಗಿನ ತಪ್ಪಲು ಪ್ರದೇಶಗಳ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಅಲ್ಲಲ್ಲಿ ಹಗುರವಾಗಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ರಾಜ್ಯದ ಉತ್ತರ ಭಾಗಗಳಲ್ಲಿ ಅಲ್ಲಲ್ಲಿ ಹಗುರವಾಗಿ ಮೋಡದ ವಾತಾವರಣದ ಇರಲಿದ್ದು. ಮಲೆನಾಡು ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮೋಡ ಮೋಡ ಸ್ವಲ್ಪ ಜಾಸ್ತಿ ಇರುವ ಮುನ್ಸೂಚನೆ ಇದೆ.
ಚಾಮರಾಜನಗರದ ಒಂದೆರಡು ಕಡೆ, ಬೆಂಗಳೂರು ದಕ್ಷಿಣ ಹಾಗೂ ಕೋಲಾರದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.
ಈಗನ ಮುನ್ಸೂಚನೆಯಂತೆ ಮೇ. 6 ಅಥವಾ 7ರಂದು ಬಂಗಾಳಕೊಲ್ಲಿಯ ಉತ್ತರ ಸುಮಾತ್ರ ಹಾಗೂ ಶ್ರೀಲಂಕಾ ಮಧ್ಯೆ ಚಂಡಮಾರುತ ರೂಪುಗೊಳ್ಳವ ಲಕ್ಷಣಗಳಿದ್ದು, ಅಲ್ಲಿಂದ ಉತ್ತರಕ್ಕೆ ಚಲಿಸಿ ಮೇ 11 ಅಥವಾ 12ರಂದು ಬಂಗ್ಲಾದೇಶ ಅಥವಾ ಮೆನ್ಮಾರ್ ಕಡಲ ತೀರಕ್ಕೆ ಅಪ್ಪಳಿಸುವ ಲಕ್ಷಣಗಳಿವೆ.
ಇದರಿಂದ ಮೋಡಗಳು ದಕ್ಷಿಣ ಶ್ರೀಲಂಕಾ ಕಡಲ ಮೂಲಕ ಬಂಗಾಳಕೊಲ್ಲಿಗೆ ಪ್ರವೇಶಿಸುವ ಸಾಧ್ಯತೆ ಇರುವುದರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಕುಂಠಿತವಾಗುವ ಸಾಧ್ಯತೆ ಇದೆ. ಬದಲಾಗಬಹುದು. ಕಾದುನೋಡಬೇಕಾಗಿದೆ.
No comments:
Post a Comment