2022ರ ಮಾರ್ಚ್ 3ರಂದು ಅಂದರೆ ಕಳೆದ ವರ್ಷ ಬಂಗಾಳಕೊಲ್ಲಿಯಲ್ಲಿ ಪ್ರಭಲ ವಾಯುಭಾರ ಕುಸಿತ ಉಂಟಾದರೂ ಕರ್ನಾಟಕದ ಕರಾವಳಿ ಭಾಗಗಳಲ್ಲಿ ತುಂತುರು ಮಳೆ ಮಾತ್ರ ಆಗಿತ್ತು. ಮಾರ್ಚ್ 19, 20 ರಿಂದ ಸುಬ್ರಹ್ಮಣ್ಯ, ಸುಳ್ಯ, ಬೆಳ್ತಂಗಡಿ ಸುತ್ತಮುತ್ತ ಉತ್ತಮ ಮಳೆ ಆರಂಭವಾಗಿತ್ತು.
ಆದರೆ ವರ್ಷ ಅಂತಹ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈಗ ಬಂಗಾಳಕೊಲ್ಲಿಯ ಕಡೆಯಿಂದ ಬೀಸುತ್ತಿರುವ ಗಾಳಿಯು ನಮ್ಮ ಒಳನಾಡು, ಮಲೆನಾಡು, ಕರಾವಳಿ ಭಾಗಗಳಿಗೆ ತಲಪುವಾಗ ಬಿಸಿಲಿನ ಪ್ರಭಾವದಿಂದ (ಮೋಡವಿಲ್ಲದ್ದರಿಂದ) ಶುಷ್ಕಗೊಂಡು ಉಷ್ಣತೆ ಇನ್ನಷ್ಟು ಹೆಚ್ಚಿಸುತ್ತಿದೆ.
ಅರಬ್ಬಿ ಸಮುದ್ರದ ಕಡೆಯಿಂದ ಗಾಳಿ ಬೀಸಲು ಆರಂಭಿಸದ ಹೊರತು ವಾತಾವರಣದಲ್ಲಿ ತೇವಾಂಶ ಕೊರತೆ ಮುಂದುವರಿಯಲಿದೆ ಹಾಗೂ ಮಳೆಯ ಸಾಧ್ಯತೆಯೂ ಕ್ಷೀಣಿಸುತ್ತಿದೆ.
ಹೀಗಾಗಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದರೆ ಪಶ್ಚಿಮದ ಕಡೆ ಬೀಸುವ ಗಾಳಿಯ ಪ್ರಭಾವ ಕಡಿಮೆಯಾಗಬಹುದು. ಅದಿಲ್ಲದಿದ್ದರೆ ರಾಜ್ಯದಲ್ಲಿ ಬಿಸಿಲು ಹಾಗೂ ಒಣ ಹವೆ ಮುಂದುವರಿಯಬಹುದು.
ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಇವತ್ತು, ನಾಳೆಯಿಂದ ಮೋಡ, ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಇದರ ಪ್ರಭಾವ ಕರ್ನಾಟಕದ ಕರಾವಳಿ ಭಾಗಗಳಿಗೂ ಉಂಟಾದರೆ ವಾತಾವರಣ ಬದಲಾಗಬಹುದು. ವಾತಾವರಣದಲ್ಲಿ ತೇವಾಂಶ ಉಂಟಾಗಿ ಹಗಲಿನ ಉಷ್ಣಾಂಶ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.
ಆದರೆ ಈಗಿನ ವಿದ್ಯಮಾನ ಪ್ರಕಾರ ಇವತ್ತಿನಿಂದ ರಾಜ್ಯದ ಕರಾವಳಿ ತೀರ ಭಾಗಗಳಲ್ಲಿ ಪಶ್ಚಿಮ ಹಾಗೂ ಪೂರ್ವದ ಗಾಳಿಯು ಸಂಧಿಸಲಿರುವುದರಿಂದ ಕರಾವಳಿ ತೀರ ಭಾಗಗಳಲ್ಲಿ ಉಷ್ಣಾಂಶ ಏರಿಕೆಯಾಗಬಹುದು.
No comments:
Post a Comment