31.01.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಜನವರಿ 31ರಂದು ಉತ್ತರ ಶ್ರೀಲಂಕಾ ತೀರಕ್ಕೆ ಅಪ್ಪಳಿಸುವ ಲಕ್ಷಣಗಳಿವೆ.
ಜನವರಿ 30ರಿಂದ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು ಫೆಬ್ರುವರಿ 2ನೇ ತಾರೀಕಿನವರೆಗೆ ಬಿಸಿಲು ಹಾಗೂ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಆಮೇಲೆ ಒಣ ಹವೆ ಮುಂದುವರಿಯಲಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಭಾಗಗಳಲ್ಲಿ ಇವತ್ತು ಸಂಜೆಯಿಂದ ಫೆಬ್ರುವರಿ 2ನೇ ತಾರೀಕಿನವರೆಗೆ ಮೋಡದ ವಾತಾವರಣ ಇರಲಿದ್ದು, ಜನವರಿ 30 ರಿಂದ ಫೆಬ್ರುವರಿ 1ನೇ ತಾರೀಕಿನವರೆಗೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು, ರಾಮನಗರ, ಚಾಮರಾಜನಗರ ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆಯೂ ಇದೆ.
ಫೆಬ್ರುವರಿ 3ನೇ ತಾರೀಕಿನಿಂದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
No comments:
Post a Comment