07.12.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ. ಆದರೂ ದಕ್ಷಿಣ ಒಳನಾಡು, ಮಲೆನಾಡು ಹಾಗೂ ದಕ್ಷಿಣ ಕರಾವಳಿ ಭಾಗಗಳಲ್ಲಿ ಸಂಜೆ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು. ಮಳೆಯ ಸಾಧ್ಯತೆ ಇರುವುದಿಲ್ಲ.
ವಾಯುಭಾರ ಕುಸಿತದ ಈಗಿನ ಪಥ ಬದಲಿಸುವ ಸಾಧ್ಯತೆ ಇದ್ದು, ತಮಿಳುನಾಡು ಕರಾವಳಿಲ್ಲಿ ಉತ್ತರಕ್ಕೆ ಸಾಗಿ ಆಂದ್ರಾದ ನೆಲ್ಲೂರು ಮೂಲಕ ಭೂಮಿಯನ್ನು ಪ್ರವೇಶಿಸುವ ಸಾಧ್ಯತೆ ಇದೆ.
ಈಗನ ಪ್ರಕಾರ ಡಿಸೆಂಬರ್ 8 ರಂದು ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದ್ದು, 9, 10ರಂದು ಕರಾವಳಿ ಹಾಗೂ ಉತ್ತರ ಒಳನಾಡಿನ ಹೆಚ್ಚಿನ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.
ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದ್ದರೆ, ಈ ಚಂಡಮಾರುತದ ಪ್ರಭಾವ ಮಹಾರಾಷ್ಟ್ರದ ಮೇಲೆ ಅಧಿಕವಾಗಿದೆ ಮತ್ತೆ ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆಯಾಗುವ ಮುನ್ಸೂಚನೆ ಇದೆ.
No comments:
Post a Comment