Advertise

04 August 2022

05.08.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

05.08.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯ ಮುನ್ಸೂಚನೆ ಇದೆ. ಆದರೂ ಮುಂಗಾರು ಒತ್ತಡವು ಮಧ್ಯ ಹಾಗೂ ದಕ್ಷಿಣ ಕೇರಳ ಕಡೆ ಮುನ್ನುಗ್ಗುತ್ತಿರುವುದರಿಂದ ಅಂತಹ ಮಳೆಯ ಸಾಧ್ಯತೆ ಕಡಿಮೆ ಅನ್ನಿಸುತ್ತಿದೆ. 
ಕೇರಳ ಮಳೆ ಹೆಚ್ಚಿರಬಹುದು. ಕಾಸರಗೋಡು, ದಕ್ಷಿಣ ಕನ್ನಡ ಉತ್ತಮ ಮಳೆಯ ಸಾಧ್ಯತೆ ಇದೆ. 
ಉಡುಪಿ ಹಾಗೂ ಉತ್ತರ ಕನ್ನಡ ಸಹ ಅಲ್ಲಲ್ಲಿ ಉತ್ತಮ ಮಳೆಯ ಸಾಧ್ಯತೆ ಇದೆ. 

ಕೊಡಗು ಹಾಗೂ ಆಗುಂಬೆ ಭಾರೀ ಮಳೆಯ ಮುನ್ಸೂಚನೆ ಇದೆ. 
ಮೈಸೂರು, ಹಾಸನ, ಚಿಕ್ಕಮಗಳೂರು ಸಹ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ. 

ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಧಾರವಾಡ, ಹಾವೇರಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ. 

ಬಳ್ಳಾರಿ, ರಾಯಚೂರು ಸಾಮಾನ್ಯವಾಗಿದ್ದರೆ, ಬಾಗಲಕೋಟೆ, ಗದಗ, ಕೊಪ್ಪಳ, ಯಾದಗಿರಿ, ವಿಜಯಪುರ, ಯಾದಗಿರಿ, ಕಲಬುರ್ಗಿ, ಬೀದರ್ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ 

ಆಗಷ್ಟ್ 5ರಿಂದ ಮೋಡಗಳ ಚಲನೆಯು ಪಶ್ಚಿಮದಿಂದ ಪೂರ್ವಕ್ಕೆ ಚಲಿಸಲು ಆರಂಭವಾಗುವುದರಿಂದ ಈಗಿನ ಸೀಮಿತ ಪ್ರದೇಶದಲ್ಲಿ ಬೀಳುವ ಮೇಘ ಸ್ಪೋಟದಂತಹ ಮಳೆ ಕಡಿಮೆಯಾಗಬಹುದು. 
ಈಗನ ಪ್ರಕಾರ ಆಗಷ್ಟ್ 6ರಿಂದ ಒಳನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಆಗುವ ಲಕ್ಷಣಗಳಿವೆ. 


No comments:

Post a Comment

26.02.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ.

26.02.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳ...