Advertise

15 May 2022

16.05.22ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

16.05.22ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಸೇರಿದಂತೆ ದಕ್ಷಿಣ ಕನ್ನಡದ ಹೆಚ್ಚಿನ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. 

ಉಡುಪಿ ಹಾಗೂ ಉತ್ತರ ಕನ್ನಡ ಅಲ್ಲಲ್ಲಿ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. 

ಉಳಿದ ಕರ್ನಾಟಕದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ  ವಾತಾವರಣದ ಸಾಧ್ಯತೆ ಇದೆ. 


ವಿಶೇಷ ವರದಿ : ಈಗನ ಮುನ್ಸೂಚೆನೆಯಂತೆ ಇವತ್ತು ಕೇರಳ ರಾಜ್ಯದಾದ್ಯಂತ ಉತ್ತಮ ಮಳೆಯ ಮುನ್ಸೂಚನೆ ಇದೆ. ಮಧ್ಯ ಕೇರಳ Red alert ಇದೆ. 

ನಾಳೆ ಅಂದರೆ ಮೇ 16ರಿಂದ 19ನೇ ತಾರೀಕಿನ ತನಕ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ ಮತ್ತು ದಕ್ಷಿಣ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. 
ಮೇ 20 ಹಾಗೂ 21 ರಂದು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. 

4 comments:

  1. ನಿನ್ನೆ ಕೋಲಾರದಲ್ಲಿ ಭಾರೀ ಮಳೆ ಬಿದ್ದಿತ್ತು. ಚಂಡಮಾರುತ ಅಸಾನಿ ಪರಿಣಾಮ. ಪುತ್ತೂರು, ಕೈಕಾರಗಳಲ್ಲಿ ಹನಿ ಮಳೆ ಆಗಾಗ. ನಿರೀಕ್ಷೆ ಯಂತೆ ಮಳೆ ಬರುತ್ತಾ ಇಲ್ಲ. ಪುನಃ ಕಳೆದ ವರ್ಷದಂತೆ ದುರ್ಬಲ ಮುಂಗಾರು ಆಗಲೂ ಬಹುದು. ಎರಡನೇ ಹಂತದ ಮುಂಗಾರು ಚುರುಕಾಗಿ ರುವ ಸಾಧ್ಯತೆ ಇದೆ.

    ReplyDelete
    Replies
    1. ಹಾಗಾದರೆ ಇನ್ನು ಬಿಸಿಲು ಮರೀಚಿಕೆ ಅಲ್ಲವೇ?

      Delete
  2. ಹಾಗಾದರೆ ಇನ್ನು( ಈ ತಿಂಗಳ ಉಳಿದ ದಿನ) ಬಿಸಿಲು ಮರೀಚಿಕೆಯೇ? ಮಳೆಗಾಲ ಶುರು ಆಯಿತೇ?

    ReplyDelete

20.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

20.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರ್ನಾಟಕ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ...