Advertise

10 May 2022

11.05.22ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

11. 05.22ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಅಸನಿ ಚಂಡಮಾರುತವು ಇವತ್ತು ಸಂಜೆ ಆಂದ್ರಾದ ಮಚಲೀಪಟ್ಟಣ ಕರಾವಳಿಗೆ ಅಪ್ಪಳಿಸುವ ಮುನ್ಸೂಚನೆ ಇದೆ ಮತ್ತು ಅಲ್ಲೆ ಶಿಥಿಲಗೊಳ್ಳುವ ಸಾಧ್ಯತೆ ಇದೆ. 
ಆಂದ್ರಾದ ಭೀಮಾವರಂ, ಎಲೂರು, ವಿಜಯವಾಡ ಹಾಗೂ ತೆನಾಲಿ ಭಾಗಗಳಲ್ಲಿ ಭಾರಿ ಹಾನಿಯಾಗುವ  ಸಂಭವವಿದೆ. 

ಪರಿಣಾಮವಾಗಿ ಕರ್ನಾಟಕದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು, ರಾಮನಗರ, ಮಂಡ್ಯ, ಚಾಮರಾಜನಗರ, ಹಾಸನ, ಮೈಸೂರು, ಚಿತ್ರದುರ್ಗ, ಬಳ್ಳಾರಿ, ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇದೆ. 

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. 

ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ.

ಮುಂಗಾರು : "ಅಸನಿ" ಯ ಪ್ರಭಾವದಿಂದ ಕರಾವಳಿ ಭಾಗಗಳಲ್ಲಿ ಮುಂಗಾರು ರೀತಿಯ ಮೋಡದ ಚಲನೆ ಇದ್ದರೂ ಮಳೆಯ ಸಾಧ್ಯತೆ ಕಡಿಮೆಯಾಗುತ್ತಿದೆ, ಹಾಗೂ ಮುಂದಿನ 2 ಅಥವಾ 3 ದಿನಗಳ ಮಟ್ಟಿಗೆ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. 



2 comments:

  1. ಇತ್ತೀಚೆಗೆ ಮುಂಗಾರು ಮಳೆ ಕಾಲದಲ್ಲಿ ಬಹಳ ಬದಲಾವಣೆ ಕಾಣುತ್ತಿದೆ. ಚಂಡಮಾರುತಗಳ ಪ್ರಭಾವದಿಂದ ಮಳೆಗಾಲ ವಿಳಂಬ, ಅಕಾಲಿಕ ಮಳೆ. ಕೃಷಿಕರಿಗೆ ಒಂದಿಲ್ಲೊಂದು ರೀತಿಯಲ್ಲಿ ಕಷ್ಟನಷ್ಟಗಳು ಬೆಂಬಿಡದೆ ಕಾಡುತ್ತಿರುವಾಗ ಉತ್ಪತ್ತಿ ಪಡೆಯಲು, ಕೃಷಿ ಮಾಡಲು ಹರಸಾಹಸ ಪಡುವಂತೆ ಆಗುತ್ತಿರುವುದು
    ಕೃಷಿಕರಿಗೆ ದೊಡ್ಡ ಸವಾಲು. ✌💐✌❤👌👍😃

    ReplyDelete

20.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

20.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರ್ನಾಟಕ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ...