06.05.22ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಮಂಡ್ಯ, ರಾಮನಗರ, ಬೆಂಗಳೂರು, ಚಾಮರಾಜನಗರ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ.
ಕೊಡಗು, ಸೋಮವಾರಪೇಟೆ, ಸಕ್ಲೇಶ್ಪುರ, ಮೂಡಿಗೆರೆ, ಆಗುಂಬೆ, ಶಿೃಂಗೇರಿ ಸುತ್ತಮುತ್ತ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಮಣ್ಯ, ಬೆಳ್ತಂಗಡಿ, ಪುತ್ತೂರು, ಧರ್ಮಸ್ಥಳ, ಕಾರ್ಕಳ ಉಡುಪಿ ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಉಳಿದ ದ. ಕ., ಕಾಸರಗೋಡು, ಉಡುಪಿ ಭಾಗಗಳಲ್ಲಿ ಅಲ್ಲಲ್ಲಿ ಮೋಡ ಅಥವಾ ತುಂತುರು ಮಳೆ ಸಾಧ್ಯತೆ ಇದೆ.
ಉತ್ತರ ಕನ್ನಡ ಒಂದೆರಡು ಭಾಗಗಳಲ್ಲಿ, ದಾವಣಗೆರೆ ಒಂದೆರಡು ಕಡೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಭಾಗಗಳಲ್ಲಿ ಸಹ ಮಳೆಯ ಮುನ್ಸೂಚನೆ ಇದೆ. ಕೆಲವುಕಡೆ ಮಳೆ ಜಾಸ್ತಿ ಇರಬಹುದು.
ಚಂಡಮಾರುತ : ಮತ್ತೆ ಮತ್ತೆ ಪಥ ಬದಲಿಸುತ್ತಿರುವ ಬಂಗಾಳಕೂಲ್ಲಿಯ ಚಂಡಮಾರುತ.
ಬಂಗಾಳಕೂಲ್ಲಿಗೆ ನೇರವಾಗಿ ದಕ್ಷಿಣಕ್ಕೆ ಹಿಂದೂಮಹಾಸಾಗರದಲ್ಲಿ ಭೂಮಧ್ಯ ರೇಖೆಗಿಂತ ಕೆಳಗೆ ಪ್ರಭಲವಾದ ಚಂಡಮಾರುತ ಇರುವುದರಿಂದ ಅದರ ಪ್ರಭಾವದಿಂದ ಬಂಗಾಳಕೂಲ್ಲಿಯ ಚಂಡಮಾರುತವು ಅಷ್ಟೇನು ಪ್ರಭಲವಾಗದಿದ್ದರೂ ಮೇ 8 ರಿಂದ ಸ್ವಲ್ಪ ತೀವ್ರ ಸ್ವರೂಪ ಪಡೆದು ಈಗಿನ ಪಥದಂತೆ ಮೇ 10 ರಂದು ಆಂದ್ರಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ.
No comments:
Post a Comment