Advertise

24 November 2021

25.11.21ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚೆನೆ

25.11.21ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚೆನೆ : 

ಕೊಡಗು, ಆಗುಂಬೆ, ಶಿೃಂಗೇರಿ, ಮೂಡಿಗೆರೆ, ಸಾಗರ, ಸಿದ್ದಾಪುರ ಸುತ್ತಮುತ್ತ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚೆನೆ ಇದೆ. ಸುಳ್ಯ, ಸುಬ್ರಮಣ್ಯ, ಬೆಳ್ತಂಗಡಿ, ಧರ್ಮಸ್ಥಳ, ಕಾರ್ಕಳ ಸುತ್ತಮುತ್ತ ಭಾಗಗಳಲ್ಲಿ ಸಹ ಗುಡುಗು ಸಹಿತ ಮಳೆಯ ಮುನ್ಸೂಚೆನೆ ಇದೆ. 

ಉತ್ತರ ಕನ್ನಡ ಹೆಚ್ಚಿನ ಭಾಗಗಳಲ್ಲಿ, ತುಮಕೂರು, ಪಾವಗಢ, ಚಿತ್ರದುರ್ಗ, ದಾವಣಗೆರೆ( ಒಂದೆರಡು ಕಡೆ), ಹಾವೇರಿ, ಧಾರವಾಡ ಜಿಲ್ಲಾಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚೆನೆ ಇದೆ. 
ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ, ಬೆಂಗಳೂರು, ಕೋಲಾರ, ರಾಮನಗರ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ. 
ಉಳಿದ ಕರ್ನಾಟಕದ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ. 


ವಾಯುಭಾರ ಕುಸಿತ : ಬಂಗಾಳಕೂಲ್ಲಿಯ ವಾಯುಭಾರ ಕುಸಿತವು ಶ್ರೀಲಂಕಾ ಪೂರ್ವ ಕರಾವಳಿ ದಾಟುತ್ತಿದ್ದಂತೆಯೆ ಶಿಥಿಲಗೊಳ್ಳುವ ಸಾಧ್ಯತೆ ಇದೆ. ಆದರೂ ಆಂದ್ರಾ ಕರಾವಳಿ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚೆನೆ ಇದೆ. 
ಪರಿಣಾಮವಾಗಿ ಕರ್ನಾಟಕದ ಒಳನಾಡು ಭಾಗಗಳಲ್ಲಿ ನವೆಂಬರ್ 27ರಿಂದ ಡಿಸೆಂಬರ್ 2ರ ತನಕ ಮಳೆಯ ಮುನ್ಸೂಚೆನೆ ಇದೆ. 
ಇದೇ ವೇಳೆಗೆ ಕರ್ನಾಟಕದ ದಕ್ಷಿಣ ಕರಾವಳಿಯಲ್ಲಿ ಸಣ್ಣ ಪ್ರಮಾಣದ ವಾಯು ನಿಮ್ನತೆ ಉಂಟಾಗುವ ಲಕ್ಷಣಗಳಿರುವುದರಿಂದ ನವೆಂಬರ್ 29ರಿಂದ ಗಗಳಲ್ಲಿ ಡಿಸೆಂಬರ್ 4ರ ತನಕ ಮಳೆಯ ಮುನ್ಸೂಚೆನೆ ಇದೆ. 

No comments:

Post a Comment

25.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

25.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ : ಕಾಸರಗೋಡು ಸೇರಿದಂತೆ ರಾಜ...