16 July 2022

17. 07.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

17.07.22ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ್ಯಂತ ಉತ್ತಮ ಮಳೆಯ ಮುನ್ಸೂಚನೆ ಇದೆ. 
ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಹಾವೇರಿ, ಯಾದಗಿರಿ, ಕಲಬುರ್ಗಿ, ಹಾಗೂ ಬೀದರ್  ಜಿಲ್ಲೆಗಳಲ್ಲಿ ಸಹ ಉತ್ತಮ ಮಳೆಯ ಮುನ್ಸೂಚನೆ ಇದೆ. 

ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.

ಚಿತ್ರದುರ್ಗ, ದಾವಣಗೆರೆ, ಗದಗ, ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಶಿಥಿಲಗೊಂಡಿದ್ದ ಒಡಿಶಾದ ಕರಾವಳಿಯ ವಾಯುಭಾರ ಕುಸಿತವು ಮತ್ತೆ ಬಲಗೊಂಡಿದ್ದು ಕರ್ನಾಟಕದ ಕರಾವಳಿಗೆ ಹಾಗೂ ಮುಂಗಾರು ಮೇಲೆ ಪರಿಣಾಮ ಬೀರುತ್ತಿದೆ. (ನಕ್ಷೆಯಲ್ಲಿ ಬಾಣ ಗುರುತು ತೋರಿಸಲಾಗಿದೆ)
ಗುಜರಾತ್ ವಾಯುಭಾರ ಕುಸಿತವು ಪಶ್ಚಿಮಾಭಿಮುಖವಾಗಿ ಚಲಿಸುತ್ತಿದೆ. 
ಈಗನ ಪ್ರಕಾರ ಜುಲೈ 19ರ ನಂತರ ಎರಡೂ ವಾಯುಭಾರ ಕುಸಿತಗಳೂ ಶಿಥಿಲಗೊಂಡು ಮುಂಗಾರು ದುರ್ಬಲಗೂಳ್ಳುವ ಲಕ್ಷಣಗಳಿವೆ. 


No comments:

Post a Comment